ಈ ಸಂಬಂಧದಲ್ಲಿ 7ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿರುವ ಪೊಲೀಸ್ ಅಧಿಕಾರಿಗಳು `ನಮ್ಮದೂ ಸಮವಸ್ತ್ರದಲ್ಲಿ ದೇಶಸೇವೆ ಕರ್ತವ್ಯದಲ್ಲಿರುವಾಗಲೇ ಅನೇಕ ಪೊಲೀಸ್ ಅಧಿಕಾರಿಗಳು ಜೀವ ತೆತ್ತಿದ್ದಾರೆ.
2013ರ ಸಾಲಿನಲ್ಲಿ ಕರ್ತವ್ಯ ನಿರ್ವಹಣೆಯಲ್ಲಿಯೇ ಜೀವ ಕಳೆದುಕೊಂಡ ಪೊಲೀಸರ ಸಂಖ್ಯೆ 4000. ಹಾಗೆಯೇ ಗಾಯಗೊಂಡವರು 3500 ಎಂಬ ಅಂಕಿ ಅಂಶಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿ ಪೊಲೀಸ್ ವ್ಯಕ್ತಿ 12-13 ಗಂಟೆಗಳು ಕೆಲಸ ಮಾಡುತ್ತಾರೆ. ಅದರಲ್ಲಿಯೂ ಕಠಿಣ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೂ ಏಕ ಶ್ರೇಣಿ ಏಕ ಪಿಂಚಣಿ ಸಿಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

