ಬಿಹಾರ ಚುನಾವಣೆ: ಪಾವತಿ ಸುದ್ದಿ ತಡೆಗೆ ಚುನಾವಣಾ ಆಯೋಗ ಕ್ರಮ

ಅಕ್ಟೋಬರ್ 12ರಿಂದ 5 ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳು ಸಾಕಷ್ಟು...
ಬಿಹಾರ ಚುನಾವಣೆಯಲ್ಲಿ ಬಿಜೆಪಿಯ ಜಾಹಿರಾತು ಮತ್ತು ಅದಕ್ಕೆ ವಿರುದ್ಧವಾಗಿ ಜೆಡಿಯುನ ಪ್ರತಿ ಜಾಹಿರಾತು
ಬಿಹಾರ ಚುನಾವಣೆಯಲ್ಲಿ ಬಿಜೆಪಿಯ ಜಾಹಿರಾತು ಮತ್ತು ಅದಕ್ಕೆ ವಿರುದ್ಧವಾಗಿ ಜೆಡಿಯುನ ಪ್ರತಿ ಜಾಹಿರಾತು
Updated on: 

ಪಾಟ್ನಾ: ಅಕ್ಟೋಬರ್ 12ರಿಂದ 5 ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳು ಸಾಕಷ್ಟು ಪ್ರಚಾರ ನಡೆಸುತ್ತಿದ್ದು, ಜಾಹಿರಾತುಗಳ ಮೂಲಕ ಜನರನ್ನು ತಲುಪಲು ಪ್ರಯತ್ನಿಸುತ್ತಿವೆ.

ಬಿಹಾರ ರಾಜ್ಯದಲ್ಲಿ ಜನಪ್ರಿಯವಾಗಿರುವ ಮಾಧ್ಯಮಗಳಾದ ಇ ಟಿವಿ ಬಿಹಾರ್, ಮಹುವಾ, ಹಿಂದೂಸ್ತಾನ್, ದೈನಿಕ್ ಜಾಗರಣ್, ದೈನಿಕ್ ಭಾಸ್ಕರ್ ಮತ್ತು ಪ್ರಭಾತ್ ಕಬರ್ ಮೊದಲಾದ ಚಾನೆಲ್ ಮತ್ತು ಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ವಿವಿಧ ರಾಜಕೀಯ ಪಕ್ಷಗಳು ನೀಡುತ್ತಿವೆ.

ತಮ್ಮ ಪಕ್ಷದ ಕೆಲಸಗಳು ಮತ್ತು ಅಜೆಂಡಾಗಳನ್ನು ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳು ಬಿತ್ತರಿಸುತ್ತಿವೆ. ಬಿಜೆಪಿಗೆ ಪ್ರಮುಖ ಚುನಾವಣೆ ಆಗಿರುವ ಬಿಹಾರ ಚುನಾವಣೆಗೆ ಅದು 'ವಿಶೇಷ ಬಿಹಾರ ಪ್ಯಾಕೇಜ್' ಎಂದು ವಿಶೇಷವಾಗಿ ಹೇಳುತ್ತಿದ್ದರೆ, ರಾಜ್ಯ ಸರ್ಕಾರ ಅದಕ್ಕೆ ವಿರುದ್ಧವಾಗಿ ವಿಶೇಷ ಪ್ಯಾಕೇಜ್ ನಲ್ಲಿ ಏನೂ ವಿಶೇಷವಿರುವುದಿಲ್ಲ ಎಂದು ಹೇಳಿದೆ.

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಸದ್ಯದಲ್ಲಿಯೇ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ತ್ವರಿತಗೊಳಿಸಿವೆ. ಒಂದು ಅಂದಾಜಿನ ಪ್ರಕಾರ, ವಿವಿಧ ಪಕ್ಷಗಳು ಜಾಹಿರಾತಿಗೆ ಸುಮಾರು 50 ಕೋಟಿ ರೂಪಾಯಿ ವ್ಯಯಿಸಲಿದೆ. ಪ್ರಚಾರದ ವೇಳೆ ಹಣ ದುರ್ಬಳಕೆಯಾಗದಂತೆ ತಡೆಗಟ್ಟಲು, ಪಾವತಿ ಸುದ್ದಿಯ ಹಾವಳಿಯನ್ನು ತಡೆಗಟ್ಟಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಪ್ರಚಾರದ ವೇಳೆ ಮತ್ತು ಚುನಾವಣೆ ಸಮಯಗಳಲ್ಲಿ ಮದ್ಯ ಸರಬರಾಜ ತಡೆಯಲು 9 ಕೇಂದ್ರ ತಂಡಗಳನ್ನು ರಚಿಸಲು ಚುನಾವಣಾ ಆಯೋಗ ನಿರ್ಧರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com