ಸೆಕ್ಸ್ ಮಾಡದಂತೆ ಪತ್ನಿಗೆ ಗುರು ಸಲಹೆ, ವಿಚ್ಛೇದನ ಪಡೆದ ಪತಿ

ಸೆಕ್ಸ್ ಮಾಡದಂತೆ ತನ್ನ ಪತ್ನಿಗೆ ಗುರು ಸೂಚಿಸಿದ ಹಿನ್ನೆಲೆಯಲ್ಲಿ ಆಕೆ ತನಗೆ ಸೆಕ್ಸ್‌ಗೆ ಅವಕಾಶ ನೀಡುತ್ತಿಲ್ಲ ಎಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬೈ: ಸೆಕ್ಸ್ ಮಾಡದಂತೆ ತನ್ನ ಪತ್ನಿಗೆ ಗುರು ಸೂಚಿಸಿದ ಹಿನ್ನೆಲೆಯಲ್ಲಿ ಆಕೆ ತನಗೆ ಸೆಕ್ಸ್‌ಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲ್ಲೇರಿದ್ದ ವ್ಯಕ್ತಿಯೊಬ್ಬನಿಗೆ ಬಾಂದ್ರಾ ಕೋರ್ಟ್ ವಿಚ್ಛೇದನ ಮಂಜೂರು ಮಾಡಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಕೋರ್ಟ್ ವಿಚಾರಣೆ ವೇಳೆ, 30 ವರ್ಷದ ಪತ್ನಿ ತನ್ನ ಗಂಡ ಅಸ್ವಾಭಾವಿಕ ಸೆಕ್ಸ್‌ಗೆ ಒತ್ತಾಯಿಸುತ್ತಿದ್ದ. ಹೀಗಾಗಿ ನಾನು ಸೆಕ್ಸ್‌ಗೆ ನಿರಾಕರಿಸಿದೆ ಎಂದು ದೂರಿದ್ದಾಳೆ. 2011ರಲ್ಲಿ ಈ ದಂಪತಿ ಮದುವೆಯಾಗಿದ್ದರು.

ಪತಿ ತನ್ನ ಅರ್ಜಿಯಲ್ಲಿ, ಮದುವೆಯಾದ ಮೊದಲ ರಾತ್ರಿ ತನ್ನ ಪತ್ನಿ ಕಾಂಡೋಮ್ ಪಾಕೇಟ್‌ಗಳನ್ನು ತಂದಿದ್ದಳು. ಅದನ್ನು ನೋಡಿ ನಾನು ಮೆಚ್ಚುಗೆ ವ್ಯಕ್ತಪಡಿಸಿದ್ದೆ. ಆದರೆ ಇದಾದ ನಾಲ್ಕು ತಿಂಗಳ ನಂತರ ಆಕೆ ಗುರು ಸೂಚನೆಯಂತೆ ಸೆಕ್ಸ್‌ಗೆ ನಿರಾಕರಿಸಿದಳು ಎಂದು ಆರೋಪಿಸಿದ್ದಾನೆ. ಅಲ್ಲದೆ ಐದು ವರ್ಷಗಳವರೆಗೆ ನಮಗೆ ಮಕ್ಕಳು ಬೇಡ ಎಂದು ಪತ್ನಿ ತನಗೆ ಹೇಳಿರುವುದಾಗಿ ಪತಿ ಹೇಳಿದ್ದಾನೆ.

ದಂಪತಿಗಳ ವಿಚ್ಛೇದನ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎ.ಮೊರೆಯ್, 'ದೈಹಿಕ ಸಂಬಂಧ ನಿರಾಕರಣೆಗೆ ಸಂಬಂಧಿಸಿದಂತೆ ಪತ್ನಿ ಬಳಿ ಅಗತ್ಯ ಕಾರಣಗಳಿಲ್ಲ. ಇದರಿಂದ ಪತಿ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ' ಎಂದು ಹೇಳಿ, ವಿಚ್ಛೇದನಕ್ಕೆ ಅನುಮತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com