ವಿಶೇಷ ಪ್ಯಾಕೇಜ್‍ಗಳು ರಾಜಕೀಯ ಅಸ್ತ್ರ: ಭಾಗವತ್

ವಿಶೇಷ ಪ್ಯಾಕೇಜ್‍ಗಳು ರಾಜಕೀಯ ಅಸ್ತ್ರಗಳಾಗಿಬಿಟ್ಟಿವೆ. ಇವು ರಾಜ್ಯಗಳ ನಡುವೆಅನಾರೋಗ್ಯಕರ ಸ್ಪರ್ಧೆ ಹುಟ್ಟುಹಾಕುತ್ತವೆ''. ಇಂತಹುದೊಂದು ಹೇಳಿಕೆ ನೀಡುವ ಮೂಲಕ..
ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ``ವಿಶೇಷ ಪ್ಯಾಕೇಜ್‍ಗಳು ರಾಜಕೀಯ ಅಸ್ತ್ರಗಳಾಗಿಬಿಟ್ಟಿವೆ. ಇವು ರಾಜ್ಯಗಳ ನಡುವೆಅನಾರೋಗ್ಯಕರ ಸ್ಪರ್ಧೆ ಹುಟ್ಟುಹಾಕುತ್ತವೆ''. ಇಂತಹುದೊಂದು ಹೇಳಿಕೆ ನೀಡುವ ಮೂಲಕ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಚುನಾವಣಾ ಕಣವಾಗಿರುವ ಬಿಹಾರದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

ಆರೆಸ್ಸೆಸ್‍ನ ಆರ್ಗನೈಜರ್‍ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ``ವಿಶೇಷ ಪ್ಯಾಕೇಜ್ ಗಳು ರಾಜಕೀಯ ಅಸ್ತ್ರವಾದೊಡನೆ, ಎಲ್ಲ ಕ್ಷೇತ್ರಗಳೂ ಬ್ಲ್ಯಾಕ್ ಮೇಲ್ ಮಾಡಲು  ಶುರುಮಾಡುತ್ತವೆ. ಇದು ಅನಾರೋಗ್ಯಕರ ಪೈಪೋಟಿಗೆ ಕಾರಣವಾಗುತ್ತದೆ. ಭಾವನಾತ್ಮಕ ಸಮನ್ವಯತೆಯೇ ಇದಕ್ಕೆಲ್ಲ ಪರಿಹಾರ'' ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಹುಟ್ಟುಹಬ್ಬ ಬಿಹಾರದಲ್ಲಿ
ಸೋಷಿಯಲಿಸ್ಟ್ ನಾಯಕ ಜಯಪ್ರಕಾಶ್ ನಾರಾಯಣ್ ಅವರ 113ನೇ ಹುಟ್ಟುಹಬ್ಬವನ್ನು ಬಿಹಾರದಲ್ಲೇ ಅದ್ಧೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಚ್ಚರಿಯೆಂದರೆ, ಈ ಕಾರ್ಯಕ್ರಮ ಮೊದಲ ಹಂತದ ಮತದಾನದ ಮುನ್ನಾ ದಿನವೇ ನಡೆಯಲಿದೆ.

ಗುಜರಾತ್‍ಗೆ ಪ್ಯಾಕೇಜ್

ಮೀಸಲು ಪ್ರತಿಭಟನೆ ನಡುವೆಯೇ ಗುಜರಾತ್ ಸರ್ಕಾರ ಗುರುವಾರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ (ಜನರಲ್ ಕೆಟಗರಿ)ಗಳಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಅದರಂತೆ, ಪಟೇಲ್  ಸಮುದಾಯ ಸೇರಿದಂತೆ ಎಲ್ಲ ವರ್ಗದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ದೊರಕಲಿದೆ ಎಂದು ಡಿಎನ್‍ಎ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com