ಶೂ ನಲ್ಲಿ ಕ್ಯಾಮೆರಾ ಇರಿಸಿ ಅಶ್ಲೀಲ ಚಿತ್ರ ತೆಗೆಯುತ್ತಿದ್ದ ವಕೀಲನ ಬಂಧನ

ಮಾಲ್‌ ಒಂದರಲ್ಲಿ ಪತ್ತೇದಾರಿ ರಹಸ್ಯ ಕ್ಯಾಮರಾವನ್ನು ಶೂಗಳಿಗೆ ಅಳವಡಿಸಿ ಮಹಿಳೆಯರ ಅಶ್ಲೀಲ ಫೋಟೊ ತೆಗೆಯುತ್ತಿದ್ದ ಕಾರ್ಪೊರೇಟ್‌ ವಕೀಲನನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮಾಲ್‌ ಒಂದರಲ್ಲಿ ಪತ್ತೇದಾರಿ ರಹಸ್ಯ ಕ್ಯಾಮರಾವನ್ನು ಶೂಗಳಿಗೆ ಅಳವಡಿಸಿ ಮಹಿಳೆಯರ ಅಶ್ಲೀಲ ಫೋಟೊ ತೆಗೆಯುತ್ತಿದ್ದ ಕಾರ್ಪೊರೇಟ್‌ ವಕೀಲನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ 35 ವರ್ಷದನಾಗಿದ್ದು, ಹರಿಯಾಣ ಗ್ರಾಹಕರ ದಿಕೆಯೊಂದರ ಅಧ್ಯಕ್ಷರ ಮಗ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ದೆಹಲಿಯ ಪ್ರಸಿದ್ದ ಮಳಿಗೆಯೊಂದರಲ್ಲಿ  ಶಾರ್ಟ್‌ ಡ್ರೆಸ್‌ ಹಾಕಿಕೊಂಡಿದ್ದ ಯುವತಿಯೊಬ್ಬಳ ಬೆನ್ನ ಹಿಂದೆ ನಿಂತಿದ್ದ ವಕೀಲ ಬಲಗಾಲಿನಲ್ಲಿ ಅಳವಡಿಸಿದ್ದ ಕ್ಯಾಮರಾ ಮೂಲಕ ಅಶ್ಲೀಲ ಚಿತ್ರ ಸೆರೆ ಹಿಡಿಯುತ್ತಿದ್ದ. ವಕೀಲನ ವರ್ತನೆ ಕಂಡು ಅನುಮಾನಗೊಂಡ ಮ್ಯಾನೇಜರ್‌ನಿಂದ ಪ್ರಕರಣ ಬಯಲಾಗಿದೆ.

ಮ್ಯಾನೇಜರ್‌ ಪ್ರಶ್ನಿಸುತ್ತಿದ್ದಂತೆಯೆ ಮಳಿಗೆಯಿಂದ ಓಡಿ ಹೋಗಲು ಯತ್ನಿಸಿದ ವಕೀಲನನ್ನು ಭದ್ರತಾ ಸಿಬ್ಬಂದಿಗಳು ಹಿಡಿದು ಶೂನಲ್ಲಿ ಅಳವಡಿಸಿದ್ದ ಕ್ಯಾಮರಾ ಪತ್ತೆ ಹಚ್ಚಿದ್ದಾರೆ.
ಪೊಲೀಸ್‌ ತನಿಖೆಯ ವೇಳೆ ಕ್ಯಾಮಾರದಲ್ಲಿ ಸೆರೆಯಾಗಿದ್ದ 12 ಅಶ್ಲೀಲ ಕ್ಲಿಪ್‌ ಗಳು ಪತ್ತೆಯಾಗಿವೆ. ವಿಡೀಯೊಗಳನ್ನು ಈತ ತಾನು ಮಾತ್ರ ನೋಡಿದ್ದಾನರೆಯೇ ಇಲ್ಲ ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾನೋ ಎನ್ನುವ ಬಗ್ಗೆ ತನಿಖೆ ಮುಂದುವರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com