ದೆಹಲಿಯ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮಕ್ಕೆ ಬೀಜಿಂಗ್ ಬೆಂಬಲ

ದೆಹಲಿಯಲ್ಲಿ ಜಾರಿಯಾಗಿರುವ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮಕ್ಕೆ ಬೀಜಿಂಗ್ ಬೆಂಬಲ ನೀಡಿದೆ.
ಸಮ-ಬೆಸ ಸಂಖ್ಯೆ  ಸಂಚಾರ ನಿಯಮ
ಸಮ-ಬೆಸ ಸಂಖ್ಯೆ ಸಂಚಾರ ನಿಯಮ
Updated on: 

ಬೀಜಿಂಗ್: ದೆಹಲಿಯಲ್ಲಿ ಜಾರಿಯಾಗಿರುವ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮಕ್ಕೆ ಬೀಜಿಂಗ್ ಬೆಂಬಲ ನೀಡಿದೆ.
ವಾಯುಮಾಲಿನ್ಯ ತಡೆಗಟ್ಟಲು ದೆಹಲಿ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಅಭಿಪ್ರಾಯ ನೀಡಿರುವ ಚೀನಾದ ಸಂಚಾರ ಇಲಾಖೆಯ ಉನ್ನತ ಅಧಿಕಾರಿ, ಸಮ-ಬೆಸ ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸಿದಲ್ಲಿ  ದೆಹಲಿ ವಾಹನ ದಟ್ಟಣೆ ಪರಿಸ್ಥಿತಿಯನ್ನು ಸುಧಾರಿಸಬಹುದು ಎಂದು ಹೇಳಿದ್ದಾರೆ.
ದೆಹಲಿ ಹಾಗೂ ಬೀಜಿಂಗ್ ನಲ್ಲಿ ಮಧ್ಯಮ ವರ್ಗಗಳ ಆದಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಾರುಗಳ ಬೇಡಿಕೆ ಹೆಚ್ಚಾಗತೊಡಗಿದ್ದು, ಸಂಚಾರ ಸಮಸ್ಯೆಗಳು ಮತ್ತು ಮಾಲಿನ್ಯ ಹೆಚ್ಚಾಗುತ್ತಿದೆ, ಚಳಿಗಾಲದಲ್ಲಿ ಎರಡೂ ನಗರಗಳಲ್ಲಿ ಹೊಗೆ ತುಂಬಿಕೊಳ್ಳುತ್ತದೆ ಪರಿಣಾಮ ಜನರ ಆರೋಗ್ಯ ಹದಗೆಡುತ್ತದೆ ಎಂದು ಚೀನಾ ಸಂಚಾರ ಇಲಾಖೆಯ ಅಧಿಕಾರಿ ಝೌ ಟಿಯಾನ್ ಹೇಳಿದ್ದಾರೆ.
2008 ರ ಒಲಂಪಿಕ್ಸ್ ವೇಳೆ ಚೀನಾ ಸಮ-ಬೆಸ ಸಂಖ್ಯೆ ಸಂಚಾರ ನಿರ್ಬಂಧ ಯೋಜನೆಯನ್ನು ಆಶ್ರಯಿಸಿತ್ತು. ಆದರೆ ದೆಹಲಿ ಜನವರಿಯಲ್ಲಿ ಜಾರಿಗೆ ತಂದಿದ್ದ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಯಶಸ್ವಿಯಾಗಿದೆ. ಬೀಜಿಂಗ್ ನಲ್ಲಿ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿರ್ಬಂಧ ಯೋಜನೆ ಜನರ ದೈನಂದಿಕ ಬದುಕಿಗೆ ಅಡಚಣೆ ಉಂಟಾಗಿತ್ತು ಎಂದು ಝೌ ಹೇಳಿದ್ದಾರೆ. ಬೀಜಿಂಗ್ ನಲ್ಲೂ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಜಾರಿ ಯಶಸ್ವಿಯಾಗಿತ್ತು. ಆದರೆ ಜನಸಾಮಾನ್ಯರ ಜೀವನಕ್ಕೆ ಅಷ್ಟೇ ಪ್ರಮಾಣದಲ್ಲಿ ಅಡ್ಡಿ ಉಂಟಾಗಿತ್ತು ಎಂದು ಝೌ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com