ಅನುಚಿತ ವರ್ತನೆ ಆರೋಪ ತಿರಸ್ಕರಿಸಿದ ಮಧ್ಯಪ್ರದೇಶ ಗೃಹ ಸಚಿವ

ತಮ್ಮ ವಿರುದ್ಧ ಕೇಳಿಬಂದ ಮಹಿಳೆಯೊಂದಿಗಿನ ಅನುಚಿತ ವರ್ತನೆ ಆರೋಪವನ್ನು ಮಧ್ಯಪ್ರದೇಶ ಹಿರಿಯ ಸಚಿವ ಬಾಬುಲಾಲ್ ಗೌರ್ ಅವರು ಶುಕ್ರವಾರ ತಿರಸ್ಕರಿಸಿದ್ದಾರೆ...
ಮಧ್ಯಪ್ರದೇಶ ಹಿರಿಯ ಸಚಿವ ಬಾಬುಲಾಲ್ ಗೌರ್
ಮಧ್ಯಪ್ರದೇಶ ಹಿರಿಯ ಸಚಿವ ಬಾಬುಲಾಲ್ ಗೌರ್
Updated on

ಭೂಪಾಲ್; ತಮ್ಮ ವಿರುದ್ಧ ಕೇಳಿಬಂದ ಮಹಿಳೆಯೊಂದಿಗಿನ ಅನುಚಿತ ವರ್ತನೆ ಆರೋಪವನ್ನು ಮಧ್ಯಪ್ರದೇಶ ಹಿರಿಯ ಸಚಿವ ಬಾಬುಲಾಲ್ ಗೌರ್ ಅವರು ಶುಕ್ರವಾರ ತಿರಸ್ಕರಿಸಿದ್ದಾರೆ.

ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ವಿರುದ್ಧದ ಆರೋಪಗಳೆಲ್ಲವೂ ಆಧಾರರಹಿತವಾದ್ದದ್ದು. ಸ್ಥಳದಲ್ಲಿ ಸಾಕಷ್ಟು ಜನರಿದ್ದರು. ಹೀಗಾಗಿ ಮಹಿಳೆಗೆ ಬೇಗ ಹೋಗುವಂತೆ ಹೇಳಿದ್ದೆ. ವಿಡಿಯೋದಲ್ಲಿರುವುದು ಉದ್ದೇಶ ರಹಿತ ತಪ್ಪಾಗಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಬಾಬುಲಾಲ್ ಗೌರ್ ಅವರು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ, ಬಾಬುಲಾಲ್ ಅವರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com