ಬಿಹಾರದ ಸಸರಾಂ ಜಿಲ್ಲೆಯ ಮೊಹುದ್ದಿಗಂಜ್ ನಿವಾಸಿಗಳಾದ ಜೈ ಗೋಬಿಂದ್ ಸಿಂಗ್ ಹಾಗೂ ಅವರ ಪತ್ನಿ ವಿಜಯಂತಿ ದೇವಿ ಅವರು ಹಲವು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಎರಡು ದಶಕಗಳ ಹಿಂದೆ ಈ ಇಬ್ಬರು ದಂಪತಿಗಳು ಮದುವೆಯಾಗಿದ್ದರು, ಆದರೆ 2003ರಲ್ಲಿ ಪತ್ನಿ ವಿಜಯಂತಿ ಅವರು ಕುಡಿದು ಬಂದು ನಿತ್ಯ ಕಿರುಕುಳ ನೀಡುತ್ತಿದ್ದ ಪತಿ ಜೈ ಗೋಬಿಂದ್ ಸಿಂಗ್ ಅವರಿಂದ ದೂರವಾಗಿದ್ದರು, ಒಂದು ವರ್ಷದ ಹೆಣ್ಣು ಮಗುವಿನೊಂದಿಗೆ ವಿಜಯಂತಿ ಪತಿಯನ್ನು ತೊರೆದು ಮನೆಯಿಂದ ಹೊರ ಬಂದಿದ್ದರು.