

ಹೈದರಾಬಾದ್: ತಾಂತ್ರಿಕ ದೋಷ ಹಿನ್ನೆಲೆ ಸ್ಪೈಸ್ ಜೆಟ್ ವಿಮಾನ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಹೈದರಾಬಾದ್ ನಿಂದ ತಿರುಪತಿಗೆ ಹೊರಟಿದ್ದ ವಿಮಾನ ಟೇಕ್ ಆಫ್ ಕೆಲ ನಿಮಿಷಗಳಲ್ಲೇ ತಾಂತ್ರಿಕ ದೋಷವನ್ನು ಗುರುತಿಸಿದ ಪೈಲಟ್ ವಿಮಾನವನ್ನು ತುರ್ತು ಭೂಸ್ಫರ್ಶ ಮಾಡಿಸಿದ್ದಾರೆ.
ಪೈಲಟ್ ನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಇನ್ನು ಪ್ರಯಾಣಿಕರು ಸುರಕ್ಷಿತರಾಗಿದ್ದು, ಅವರ ಪ್ರಯಾಣಕ್ಕೆ ಬೇರೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.