ಮದುವೆ ಮನೆಯಲ್ಲಿ ಐಸ್ ಕ್ರೀಂ ಸಿಕ್ಕಿಲ್ಲ ಎಂಬ ಕಾರಣದಿಂದ ಜಗಳ: 10 ಮಂದಿಗೆ ಗಾಯ

ಇಲ್ಲಿನ ರಯಾ ಪ್ರದೇಶದಲ್ಲಿ ಮದುವೆ ನಡೆದಿದ್ದು, ಮಧ್ಯಾಹ್ನ 2 ಗಂಟೆಯ ವೇಳೆ ವರನ ಕಡೆಯವರಿಗೆ ಐಸ್ ಕ್ರೀಂ ಸಿಕ್ಕಿಲ್ಲ ಎಂದು ವಾಗ್ವಾದ ನಡೆದಿದೆ. ವಧು ಮತ್ತು ವರನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಆಗ್ರಾ: ಬುಧವಾರ ಮಥುರಾದಲ್ಲಿ ನಡೆದ ಮದುವೆಯೊಂದರಲ್ಲಿ ವರನ ಕಡೆಯವರಿಗೆ ಐಸ್‌ಕ್ರೀಂ ಸಿಕ್ಕಿಲ್ಲ ಎಂಬ ಕಾರಣದಿಂದ ಜಗಳ ನಡೆದಿದೆ. 
ಇಲ್ಲಿನ ರಯಾ ಪ್ರದೇಶದಲ್ಲಿ ಮದುವೆ ನಡೆದಿದ್ದು,  ರಾತ್ರಿ 2 ಗಂಟೆಯ ವೇಳೆ ವರನ ಕಡೆಯವರಿಗೆ ಐಸ್ ಕ್ರೀಂ ಸಿಕ್ಕಿಲ್ಲ ಎಂದು ವಾಗ್ವಾದ ನಡೆದಿದೆ. ವಧು ಮತ್ತು ವರನ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು ಆಮೇಲೆ ಎರಡೂ ಕಡೆಯವರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಈ ಜಗಳ ತಾರಕಕ್ಕೇರುತ್ತಿದ್ದಂತೆ ಅತಿಥಿಯೊಬ್ಬರು ಪೊಲೀಸರಿಗೆ ಫೋನ್ ಮಾಡಿದ್ದಾರೆ.
ಜಗಳವನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಗಿ ಬಂತು. ಪೊಲೀಸರು ಸ್ಥಳಕ್ಕಾಗಮಿಸಿದಾಗ ಅಲ್ಲಿ ಜಗಳವಾಡುತ್ತಿದ್ದವರು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ಹದ ಮೀರುತ್ತಿದ್ದಂತೆ ಮದುವೆ ಮನೆಯಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಯಿತು. 
ಈ ಜಗಳದಲ್ಲಿ 10 ಮಂದಿಗೆ ಗಾಯಗಳಾಗಿದ್ದು, 6 ಮಂದಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com