ದೇಶ

ಕೇರಳ ಚುನಾವಣಾ ಸೋಲು: ಒಡೆದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ

ಕೇರಳ ವಿಧಾನಸಭಾ ಚುನಾವಣಾ ಸೋಲಿನ ಪರಿಣಾಮ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಒಡೆದಿದೆ.

ಕೇರಳ ಚುನಾವಣಾ ಸೋಲು: ಒಡೆದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ
ಯುಡಿಎಫ್ ಮೈತ್ರಿಕೂಟ
Published On :

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆ ಸೋಲಿನ ಪರಿಣಾಮ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಒಡೆದಿದೆ. ಯುಡಿಎಫ್ ಮೈತ್ರಿಕೂಟದಿಂದ ಕೇರಳ ಕಾಂಗ್ರೆಸ್(ಮಣಿ) ಹೊರನಡೆದಿದ್ದು, ಚುನಾವಣಾ ಸೋಲಿಗೆ ಕಾಂಗ್ರೆಸ್ ನ ನಾಯಕತ್ವವೇ ಕಾರಣ ಎಂದು ಆರೋಪಿಸಿದೆ. 
ಮೈತ್ರಿಕೂಟದಿಂದ ಹೊರಬಂದಿರುವ ಬಗ್ಗೆ ಮಾತನಾಡಿರುವ ಕೇರಳದ ಮಾಜಿ ಹಣಕಾಸು ಸಚಿವ, ಕೆಎಂ ಮಣಿ, ಈ ನಿರ್ಧಾರವನ್ನು ಹಿಂದೆಯೇ ತೆಗೆದುಕೊಳ್ಳಬೇಕಿತ್ತು. ಆದರೆ ಈಗ ತೆಗೆದುಕೊಳ್ಳಲಾಗಿದೆ. ನಾವು ಯಾರನ್ನು ಶಪಿಸದೆ ಯುಡಿಎಫ್ ಮೈತ್ರಿಕೂಟದಿಂದ ಹೊರನಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೇರಳ ವಿಧಾನಸಭೆಯಲ್ಲಿರುವ ನಮ್ಮ ಪಕ್ಷದ ಸದಸ್ಯರು, ಹಾಗು ಸಂಸತ್ ನಲ್ಲಿರುವ  ನಮ್ಮ ಪಕ್ಷದ ಇಬ್ಬರು ಸದಸ್ಯರು ಪ್ರತ್ಯೇಕವಾಗಿ ಕುಳಿತುಕೊಳ್ಳಲಿದ್ದಾರೆ ಹಾಗು ವಿಷಯವನ್ನು ಆಧರಿಸಿ ಸರ್ಕಾರಕ್ಕೆ ಬಂಬಲ ಸೂಚಿಸಲಿದ್ದೇವೆ, ಸರ್ಕಾರಕ್ಕೆ ಆಡಳಿತ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ ಎಂದು ಕೆಎಂ ಮಣಿ ತಿಳಿಸಿದ್ದಾರೆ.
ಕೇರಳ ಕಾಂಗ್ರೆಸ್( ಮಣಿ) 1982 ರಿಂದ ಯುಡಿಎಫ್ ಮೈತ್ರಿಕೂಟದಲ್ಲಿ ಕಾಣಿಸಿಕೊಂಡಿತ್ತು. ಮಣಿ ನೇತೃತ್ವದ ಪಕ್ಷ ಮೈತ್ರಿಯಿಂದ ಹೊರನಡೆದಿರುವ ಪರಿಣಾಮ ಕೇರಳ ವಿಧಾನಸಭೆಯಲ್ಲಿ ಯುಡಿಎಫ್ ನ ಮೈತ್ರಿಕೂಟದ ಸಂಖ್ಯೆ 47 ರಿಂದ 41 ಕ್ಕೆ ಇಳಿಯಲಿದೆ. ಇನ್ನು ಯುಡಿಎಫ್ ಮೈತ್ರಿಕೂಟದಿಂದ ಕೇರಳ ಕಾಂಗ್ರೆಸ್ ಪಕ್ಷ ಹೊರನಡೆದಿರುವುದು ನೋವಿನ ಸಂಗತಿ ಎಂದು ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ಪ್ರತಿಕ್ರಿಯೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.