

ನವದೆಹಲಿ: ರಿಯೋ ಒಲಂಪಿಕ್ಸ್ ಗೆ ರಾಯಭಾರಿಗಳಲ್ಲಿ ಒಬ್ಬರಾಗಿರುವ ಸಲ್ಮಾನ್ ಖಾನ್, ಒಲಂಪಿಕ್ಸ್ ನ ಪದಕ ವಿಜೇತೆ ಪಿವಿ ಸಿಂಧು ಅವರೊಂದಿಗೆ ತಾವು ತೆಗೆಸಿಕೊಂಡಿದ್ದ ಫೋಟೋವನ್ನು ಟ್ವಿಟರ್ ನಲ್ಲಿ ಅಪ್ ಡೇಟ್ ಮಾಡಿದ್ದಾರೆ.
ರಿಯೋ ಒಲಂಪಿಕ್ಸ್ ನ ಬ್ಯಾಡ್ಮಿಂಟನ್ ಫೈನಲ್ ಪಂದ್ಯವನ್ನು ತಮ್ಮ ತಾಯಿಯೊಂದಿಗೆ ವೀಕ್ಷಿಸಿದ್ದಾಗಿ ಟ್ವಿಟರ್ ನಲ್ಲಿ ತಿಳಿಸಿರುವ ಸಲ್ಮಾನ್ ಖಾನ್, ಸಿಂಧು ಅವರೊಂದಿಗೆ ಫೋಟೋ ತೆಗೆಸಿಕೊಂಡಿರುವುದಾಗಿ ತಾಯಿಗೆ ಹೇಳಿದೆ ಎಂದು ಬರೆದಿದ್ದಾರೆ. ರಿಯೋ ಒಲಂಪಿಕ್ಸ್ ನ ಮಹಿಳಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದಾರೆ.