ಪುಲ್ವಾಮದಲ್ಲಿ ಗ್ರೆನೇಡ್ ದಾಳಿ: 9 ಯೋಧರಿಗೆ ಗಾಯ

ಉಗ್ರರು ನಡೆಸಿರುವ ಗ್ರೆನೇಡ್ ದಾಳಿಗೆ 9 ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪುಲ್ವಾಮದಲ್ಲಿ ಬುಧವಾರ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಉಗ್ರರು ನಡೆಸಿರುವ ಗ್ರೆನೇಡ್ ದಾಳಿಗೆ 9 ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪುಲ್ವಾಮದಲ್ಲಿ ಬುಧವಾರ ನಡೆದಿದೆ.

ಪುಲ್ವಾಮ ಟೌನ್ ನ 32 ಕಿ.ಮೀ ದೂರದಲ್ಲಿರುವ ಪದವಿ ಕಾಲೇಜೊಂದರ ಬಳಿ ಯೋಧರು ಭದ್ರತೆಯನ್ನು ನೀಡುತ್ತಿದ್ದರು. ಈ ವೇಳೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, 4 ಸಿಆರ್ ಪಿಎಫ್ ಯೋಧರು ಸೇರಿದಂತೆ 9 ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಗ್ರರು ಗ್ರೆನೇಡ್ ದಾಳಿ ನಡೆಸುತ್ತಿದ್ದಂತೆ ಉಗ್ರರನ್ನು ಸದೆಬಡಿಯಲು ಭದ್ರತಾ ಸಿಬ್ಬಂದಿಗಳು ಕಾರ್ಯಾಚರಣೆಗಿಳಿದಿದ್ದಾರೆಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com