ತಿರುವನಂತಪುರಂ: ತಮಿಳುನಾಡು ಸಿಎಂ ಜಯಲಲಿತಾ ಅವರ ನಿಧನಕ್ಕೆ ಕೇರಳ ಸರ್ಕಾರ ಸಂತಾಪ ಸೂಚಿಸಿದ್ದು ಒಂದು ದಿನ ರಜ ಘೋಷಿಸಲಾಗಿದೆ.
ಡಿ.6 ರಂದು ಎಲ್ಲಾ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದ್ದು ಶೋಕಾಚರಣೆ ಮಾಡಲಾಗಿದೆ. ನಾಲ್ಕು ಬಾರಿ ತಮಿಳುನಾಡಿನ ಸಿಎಂ ಆಗಿ ಆಯ್ಕೆಯಾಗಿದ್ದ ಸಿಎಂ ಜಯಲಲಿತಾ ಅವರು ಡಿ.5 ರ ರಾತ್ರಿ 11:30 ಕ್ಕೆ ನಿಧನರಾಗಿದ್ದರು.
ಕೇಂದ್ರ ಸರ್ಕಾರದಿಂದಲೂ ಒಂದು ದಿನದ ಮಟ್ಟಿಗೆ ಶೋಕಾಚರಣೆ: ಜಯಲಲಿತಾ ನಿಧನಕ್ಕೆ ಕೇಂದ್ರದ ನಾಯಕರೂ ಸಂತಾಪ ಸೂಚಿಸಿದ್ದು, ಕೇಂದ್ರ ಸರ್ಕಾರ ಸಹ ಒಂದು ದಿನದ ಮಟ್ಟಿಗೆ ಶೋಕಾಚರಣೆ ಘೋಷಿಸಿದೆ.
ಜಯಲಲಿತಾ ನಿಧನಕ್ಕೆ ಮಲಯಾಳಂ ನ ನಟ ಮುಮ್ಮಟಿ ಸಂತಾಪ
ಡಿ.5 ರಂದು ನಿಧನರಾಗಿದ್ದ ಜಲಯಲಲಿತಾ ಅವರ ನಿಧನಕ್ಕೆ ಮಲಯಾಳಂ ನ ನಟ ಮುಮಟಿ ಸಂತಾಪ ಸೂಚಿಸಿದ್ದಾರೆ. ಐರನ್ ಲೇಡಿ ಇನ್ನಿಲ್ಲ, ಜಯಲಲಿತಾ ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.