3600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿ ಸ್ಮಾರಕದ ವಿಶೇಷತೆ!

ಛತ್ರಪತಿ ಶಿವಾಜಿ ಸ್ಮಾರಕ ಸ್ಮಾರಕ ಭಾರತದಲ್ಲಿಯಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತೀ ಎತ್ತರದ ಸ್ಮಾರಕವಾಗಲಿದೆ ಎಂದು ಹೇಳಿದ್ದರು.
ಶಿವಾಜಿ ಸ್ನಾರಕದ ಮಾದರಿ (ಸಂಗ್ರಹ ಚಿತ್ರ)
ಶಿವಾಜಿ ಸ್ನಾರಕದ ಮಾದರಿ (ಸಂಗ್ರಹ ಚಿತ್ರ)
Updated on: 

ಮುಂಬೈ: ಸುಮಾರು 3600 ಕೋಟಿ ರು.ವೆಚ್ಚದಲ್ಲಿ ಮುಂಬೈ ಕರಾವಳಿ ತೀರದಲ್ಲಿ ನಿರ್ಮಾಣವಾಗುತ್ತಿರುವ ಉದ್ದೇಶಿತ ಛತ್ರಪತಿ ಶಿವಾಜಿ ಸ್ಮಾರಕ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶಂಕು ಸ್ಥಾಪನೆ  ನೆರವೇರಿಸಿದ್ದು, ಈ ಬೃಹತ್ ಸ್ಮಾರಕ ಭಾರತದಲ್ಲಿಯಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತೀ ಎತ್ತರದ ಸ್ಮಾರಕವಾಗಲಿದೆ ಎಂದು ಹೇಳಿದ್ದರು.

ಮಹಾರಾಷ್ಟ್ರ ಸರ್ಕಾರದ ಕನಸಿನ ಯೋಜನೆ ಎಂದೇ ಹೇಳಲಾಗುತ್ತಿರುವ ಶಿವ ಸ್ಮಾರಕ ಅಥವಾ ಛತ್ರಪತಿ ಶಿವಾಜಿ ಸ್ಮಾರಕ ಭವನವನ್ನು ಸುಮಾರು 3600 ಕೋಟಿ ರು.ವೆಚ್ಚದಲ್ಲಿ ಸ್ಥಾಪನೆ ಮಾಡಲಾಗುತ್ತಿದ್ದು, ಈ ಸ್ಮಾಪಕ ಭವನದ  ಒಂದಷ್ಟು ಕುತೂಹಲಕಾರಿ ಅಂಶಗಳು ಇಲ್ಲಿವೆ.

ಶಿವ ಸ್ಮಾರಕ ನಿರ್ಮಾಣಕ್ಕೆ ಒಟ್ಟು 3600 ಕೋಟಿ ರು.ಗಳು ವೆಚ್ಚವಾಗಲಿದ್ದು, ಸುಮಾರು 15.96 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಶಿವಾಜಿ ಸ್ಮಾರಕದ ಒಟ್ಟು ಎತ್ತರ 190 ಮೀಟರ್ ಗಳಾಗಿದ್ದು, ಬೃಹತ್ ಸ್ಮಾರಕ  ಭವನದಲ್ಲಿ ಒಮ್ಮೆಲೆ ಸುಮಾರು 3 ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಆಸನಗಳ ವ್ಯವಸ್ಥೆ ಹೊಂದಿರಲಿದೆ. ಇನ್ನು ಸ್ಮಾರಕ ಭವನದಲ್ಲೇ ಮ್ಯೂಸಿಯಂ ಸ್ಥಾಪನೆಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ರಾಜ ಶಿವಾಜಿ ಬಳಕೆ  ಮಾಡಿದ್ದ ಅಪರೂಪದ ವಸ್ತುಗಳನ್ನು ಭಾರಿ ಭದ್ರತೆಯೊಂದಿಗೆ ಇಲ್ಲಿ ಶೇಖರಿಸಿಡಲಾಗುತ್ತದೆ.

500 ಆಸನಗಳ ಒಳಾಂಗಣ ಮತ್ತು 2000 ಆಸನಗಳ ವ್ಯವಸ್ಥೆ ಹೊಂದಿರುವ ಹೊರಾಂಗಣ ಸ್ಟೇಡಿಯಂ ಅನ್ನು ಈ ಬೃಹತ್ ಸ್ಮಾರಕಭವನ ಹೊಂದಿರಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇವುಗಳನ್ನು  ಬಳಸಿಕೊಳ್ಳಲಾಗುತ್ತದೆ. ಇದಲ್ಲದೆ ಶಿವಾಜಿ ಮಹಾರಾಜನ ಜೀವನ ಚರಿತ್ರೆಯನ್ನು ಬಿಂಬಿಸುವ ಚಿತ್ರಪಟಗಳ ಗ್ಯಾಲರಿ ಕೂಡ ಇರಲಿದ್ದು, ಲೇಸರ್ ಪ್ರದರ್ಶನ, ಬೃಹತ್ ಅಕ್ವೇರಿಯಂ ಹಾಗೂ ಜಲ ಕ್ರೀಡೆ ಅಡಬಹುದಾದ ಪುಟ್ಟನೀರಿನ  ಸಾಹಸ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತದೆ. ಅಂತೆಯೇ ಸ್ಮಾರಕಕ್ಕೆ ಭೇಟಿ ನೀಡುವ ಗಣ್ಯರಿಗಾಗಿ ಸ್ಮಾರಕದ ಆವರಣದಲ್ಲಿ ಮೂರು ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದಲ್ಲದೆ ಸಾಮಾನ್ಯ ಸವಲತ್ತುಗಳಾದ ಸ್ವಾಗತ ಕೇಂದ್ರ, ಶೌಚಾಲಯಗಳು, ಕಾಫಿ ಕೆಫೆ, ಬುಕ್ ಸ್ಟಾಲ್ ಗಳು ಸ್ಮಾರಕದಲ್ಲಿರಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com