ದೇಶ

ಕದನ ವಿರಾಮ ಉಲ್ಲಂಘನೆ ಮುಂದುವರೆದರೆ ಭಾರತ ಪಾಕ್ ಗಡಿಯ ಮೇಲೆ ದಾಳಿ ನಡೆಸಬೇಕು: ರಕ್ಷಣಾ ತಜ್ಞ

ಪಾಕಿಸ್ತಾನ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುವುದನ್ನು ಮುಂದುವರೆಸಿದರೆ ಪಾಕ್ ಗಡಿಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಬೇಕೆಂದು ರಕ್ಷಣಾ ತಜ್ಞ ನಿವೃತ್ತ ಮೇಜರ್ ಜನರಲ್ ಎಸ್ಆರ್ ಸಿನ್ಹೋ ಅಭಿಪ್ರಾಯಪಟ್ಟಿದ್ದಾರೆ.

ಕದನ ವಿರಾಮ ಉಲ್ಲಂಘನೆ ಮುಂದುವರೆದರೆ ಭಾರತ ಪಾಕ್ ಗಡಿಯ ಮೇಲೆ ದಾಳಿ ನಡೆಸಬೇಕು: ರಕ್ಷಣಾ ತಜ್ಞ
ಗಡಿಯಲ್ಲಿ ಭಾರತೀಯ ಸೇನೆ ( ಸಂಗ್ರಹ ಚಿತ್ರ)
Published On :
ಭೋಪಾಲ್: ಪಾಕಿಸ್ತಾನ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುವುದನ್ನು ಮುಂದುವರೆಸಿದರೆ ಪಾಕ್ ಗಡಿಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಬೇಕೆಂದು ರಕ್ಷಣಾ ತಜ್ಞ ನಿವೃತ್ತ ಮೇಜರ್ ಜನರಲ್ ಎಸ್ಆರ್ ಸಿನ್ಹೋ ಅಭಿಪ್ರಾಯಪಟ್ಟಿದ್ದಾರೆ. 
ಪಾಕ್ ಸೇನೆಯ ಯೋಧರ ಮೇಲೆ ಹೆಚ್ಚಿನ ಹಾನಿ ಸಂಭವಿಸುವವರೆಗೂ ಪಾಕಿಸ್ತಾನ ಬುದ್ಧಿ ಕಲಿಯುವುದಿಲ್ಲ. ಪಾಕಿಸ್ತಾನದಲ್ಲಿ ಹೊಸ ಸೇನಾ ಮುಖ್ಯಸ್ಥರು ಅಧಿಕಾರ ವಹಿಸಿಕೊಂಡ ಬಳಿಕ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಲಿವೆ ಎಂದು ಭಾರತ ಭಾವಿಸಿತ್ತು ಆದರೆ ಹಾಗಾಗಲಿಲ್ಲ. ಈ ಹಿಂದಿನ ಪಾಕ್ ಸೇನಾ ಮುಖ್ಯಸ್ಥ ಪ್ರಧಾನಿ ನವಾಜ್ ಷರೀಫ್ ಅವರನ್ನು ನಿಯಂತ್ರಿಸುವ ವಿಷಯದಲ್ಲಿ ಹೆಚ್ಚು ಶಕ್ತಿ, ಪ್ರಭಾವ ಹೊಂದಿದ್ದರು ಎಂಡು ಸಿನ್ಹೋ ತಿಳಿಸಿದ್ದಾರೆ. 
ಹೊಸ ಸೇನಾ ಮುಖ್ಯಸ್ಥರ ನೇಮಕವಾದ ನಂತರ ಪಾಕ್ ಪ್ರಧಾನಿ ಸಹ ಶಾಂತಿಯನ್ನು ಬಯಸುತ್ತಾರೆ ಎಂದು ಭಾರತ ಭಾವಿಸಿತ್ತು. ಆದರೆ ಗಡಿಯಲ್ಲಿ ಕದನ ವಿರಾಮ ಮತ್ತೆ ಉಲ್ಲಂಘನೆಯಾಗಿದೆ. ಕಾಶ್ಮೀರದ ವಿವಾದ ಬಗೆಹರಿಯುವವರೆಗೂ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮುಂದುವರೆಯಲಿದೆ ಎಂದು ಸಿನ್ಹೋ ಅಭಿಪ್ರಾಯಪಟ್ಟಿದ್ದಾರೆ. 
ನಿರಂತರವಾಗಿ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆಯನ್ನು ತಡೆಗಟ್ಟಲು ಭಾರತ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್, ಸೀಮಿತ ದಾಳಿ ನಡೆಸಿರುವುದು ಸಾಲದು, ಈಗ ಭಾರತೀಯ ಸೇನೆ ಪಾಕಿಸ್ತಾನ ಸೇನೆಯ ಪೋಸ್ಟ್ ಗಳ ಮೇಲೆ ದಾಳಿ ನಡೆಸಿ ಪಾಕ್ ಸೇನೆಯಲ್ಲಿ ಹೆಚ್ಚು ಹಾನಿ ಉಂಟಾಗುವಂತೆ ಮಾಡಬೇಕು ಎಂದು ಸಿನ್ಹೋ ಸಲಹೆ ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.