ಶೀನಾ ಬೋರಾ ಹತ್ಯೆ ಪ್ರಕರಣ: ಪೀಟರ್ ಮುಖರ್ಜಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಶೀನಾಬೋರಾ ಹತ್ಯೆ ಪ್ರಕರಣದಲ್ಲಿ ಉದ್ಯಮಿ ಪೀಟರ್ ಮುಖರ್ಜಿ ವಿರುದ್ಧ ಕೊಲೆ ಸಂಚು ರೂಪಿಸಿದ ಆರೋಪ ಹೊರಿಸಿ ಸಿಬಿಐ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸಿದೆ...
ಪೀಟರ್ ಮುಖರ್ಜಿ
ಪೀಟರ್ ಮುಖರ್ಜಿ

ಮುಂಬೈ: ಶೀನಾಬೋರಾ ಹತ್ಯೆ ಪ್ರಕರಣದಲ್ಲಿ ಉದ್ಯಮಿ ಪೀಟರ್ ಮುಖರ್ಜಿ ವಿರುದ್ಧ ಕೊಲೆ, ಸಾಕ್ಷ್ಯಾಧಾರ ನಾಶ ಮತ್ತು ಕ್ರಿಮಿನಲ್ ಸಂಚು ರೂಪಿಸಿದ ಆರೋಪ ಹೊರಿಸಿ ಸಿಬಿಐ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸಿದೆ. 2009 ರಿಂದ ಶೀನಾ ಬೋರಾ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಈ ಸಂಚಿನಲ್ಲಿ ಪೀಟರ್ ಮುಖರ್ಜಿ ಕೂಡ ಭಾಗಿಯಾಗಿದ್ದರು ಎಂದು ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಮಾಹಿತಿ ಬಹಿರಂಗವಾಗಿದೆ.

ಪೀಟರ್ ಮುಖರ್ಜಿ ವಿರುದ್ಧ ಸಿಬಿಐ ಸೆಷನ್ ಕೋರ್ಟ್ ಗೆ  ಪೂರಕ ಚಾರ್ಜ್​ಶೀಟ್ ಸಲ್ಲಿಸಿದೆ. ಚಾರ್ಜ್​ಶೀಟ್​ನಲ್ಲಿ ಶೀನಾಬೋರಾ ಹತ್ಯೆ ಪ್ರಕರಣದಲ್ಲಿ ಪೀಟರ್ ಪಾತ್ರ ಹಾಗೂ ಹಣಕಾಸು ವ್ಯವಹಾರಗಳ ಕುರಿತು ಮಾಹಿತಿ ಒದಗಿಸಲಾಗಿದೆ.

ಈ ಪ್ರಕರಣದಲ್ಲಿ ಮೊದಲ ಆರೋಪಿ ಪೀಟರ್ ಮುಖರ್ಜಿ ಪತ್ನಿ ಇಂದ್ರಾಣಿ ಮುಖರ್ಜಿ ಆಗಿದ್ದು, ಆರ್ಥರ್ ರೋಡ್ ಜೈಲಿನಲ್ಲಿ ಬಂಧಿಯಾಗಿರುವ ಪೀಟರ್ ಮುಖರ್ಜಿಯನ್ನು ಕಳೆದ ಎರಡು ವಾರದಿಂದ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.  2012ರಲ್ಲಿ ಶೀನಾ ಬೋರಾ (24) ದೇಹ ರಾಯಗಢ ಜಿಲ್ಲೆಯ ಕಾಡಲ್ಲಿ ಸುಟ್ಟ ಸ್ಥಿತಿಯಲ್ಲಿ ಕಾಣಿಸಿಕೊಂಡಿತ್ತು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com