ಮಾಜಿ ಎಐಆರ್ ಅಧಿಕಾರಿ ಮನೆ ಬಳಿ ಬಾಂಬ್ ಸ್ಫೋಟ

ಇಂಪಾಲದ ಅಖಿಲ ಭಾರತ ಬಾನುಲಿ ಕೇಂದ್ರದ ಮಾಜಿ ಜಂಟಿ ನಿರ್ದೇಶಕ ಬಿಬಿ ಶರ್ಮಾ ಅವರ ನಿವಾಸದ ಬಳಿ ಬಾಂಬ್ ವೊಂದು ಸ್ಫೋಟಗೊಂಡಿರುವುದಾಗಿ ಬುಧವಾರ ತಿಳಿದುಬಂದಿದೆ...
ಮಾಜಿ ಎಐಆರ್ ಅಧಿಕಾರಿ ಮನೆ ಬಳಿ ಬಾಂಬ್ ಸ್ಫೋಟ  (ಸಾಂದರ್ಭಿಕ  ಚಿತ್ರ)
ಮಾಜಿ ಎಐಆರ್ ಅಧಿಕಾರಿ ಮನೆ ಬಳಿ ಬಾಂಬ್ ಸ್ಫೋಟ (ಸಾಂದರ್ಭಿಕ ಚಿತ್ರ)
ಇಂಪಾಲ: ಇಂಪಾಲದ ಅಖಿಲ ಭಾರತ ಬಾನುಲಿ ಕೇಂದ್ರದ ಮಾಜಿ ಜಂಟಿ ನಿರ್ದೇಶಕ ಬಿಬಿ ಶರ್ಮಾ ಅವರ ನಿವಾಸದ ಬಳಿ ಬಾಂಬ್ ವೊಂದು ಸ್ಫೋಟಗೊಂಡಿರುವುದಾಗಿ ಬುಧವಾರ ತಿಳಿದುಬಂದಿದೆ. 
ಬಿಬಿ ಶರ್ಮಾ ಅವರ ಉಹಿಪೊಕ್ ಯೆಮ್ಬೆಂ ಲೀಕೈ ನಲ್ಲಿರುವ ನಿವಾಸದ ಬಳಿ ನಿನ್ನೆ ರಾತ್ರಿ 7.30ರ ಸುಮಾರಿಗೆ ಮಧ್ಯಮ ತೀವ್ರತೆಯ ಬಾಂಬ್ ವೊಂದು ಸ್ಫೋಟಗೊಂಡಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಲಿ, ಪ್ರಾಣಾಪಾಯಗಳಾಗಲಿ ಸಂಭವಿಸಿಲ್ಲ. 
ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆಯ ಸ್ಥಳಕ್ಕಾಗಿಸಿರುವ ಮಣಿಪುರದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಫೋಟಕ್ಕೆ ಈ ವರೆಗೂ ಯಾವುದೇ ಕಾರಣಗಳೂ ತಿಳಿದುಬಂದಿಲ್ಲ. ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com