

ನವದೆಹಲಿ: 2016-17ರ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷಾ ವರದಿಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಿದ್ದಾರೆ.
ಪ್ರಸ್ತುತ ಮಂಡನೆಯಾಗಿರುವ ಆರ್ಥಿಕ ಸಮೀಕ್ಷಾ ವರದಿಯ ಪ್ರಕಾರ, ಸರ್ಕಾರ ಆರ್ಥಿಕ ಘನೀಕರಣ ಹಾಗೂ ಹಣದುಬ್ಬರವನ್ನು ಇಳಿಸಲು ಬದ್ಧವಾಗಿದ್ದು, ಇದರಂತೆ ವಿಸ್ತೃತ ಆರ್ಥಿಕ ವ್ಯವಸ್ಥೆ ಸ್ಥಿರವಾಗಿದೆ ಎಂದು ಸರ್ಕಾರ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿಕೊಂಡಿದೆ.
ಇದಲ್ಲದೆ ಸಮೀಕ್ಷಾ ವರದಿಯಲ್ಲಿ ಆರ್ಥಿಕ ಬೆಳವಣಿಗೆಯಲ್ಲಿಯೂ ಭಾರತ ಅಭಿವೃದ್ಧಿ ಕಂಡಿದ್ದು, ಜಿಡಿಪಿ 7-7.5ರಷ್ಟು ಬೆಳವಣಿಗೆಯಾಗಿದೆ. ಶೇ.8-10ರವರೆಗೆ ಗಣನೀಯವಾಗಿ ಬೆಳೆವಣಿಗೆಯಾಗುವ ಸಾಧ್ಯತೆಗಳಿವೆ ಎಂದು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ಹೇಳಿದ್ದಾರೆ.