

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದರೆ ಬಿಜೆಪಿಗೆ ರು. 10 ಲಕ್ಷ ಮತ್ತು ಚಿನ್ನದ ಕಿರೀಟ ದಾನವಾಗಿ ನೀಡುವುದಾಗಿ ಸಮಾಜವಾದಿ ಪಕ್ಷದ ವಿಧಾನ ಪರಿಷತ್ ಸದಸ್ಯ ಬುಕ್ಕಾ ನವಾಬ್ ಶುಕ್ರವಾರ ಬಿಜೆಪಿಗೆ ಸವಾಲು ಎಸೆದಿದ್ದಾರೆ. ಆಯೋಧ್ಯದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳುತ್ತಿರುವ ಬಿಜೆಪಿಗೆ ತಿರುಗೇಟು ನೀಡಿರುವ ಬುಕ್ಕಾ ನವಾಬ್, 'ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ರಾಮ ಮಂದಿರ ವಿವಾದವನ್ನು ಮುನ್ನೆಲೆಗೆ ತಂದಿದೆ. ಅವರೇನಾದರೂ ಇಲ್ಲಿ ಮಂದಿರ ನಿರ್ಮಿಸಿದರೆ, ಅವರಿಗೆ ರು.10 ಲಕ್ಷ ಹಣ ಮತ್ತು ಒಂದು ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ಕೊಡುತ್ತೇನೆ'' ಎಂದು ಹೇಳಿದ್ದಾರೆ.