ಕೆಲಸವಿಲ್ಲದ ತಿವಾರಿ ನನ್ನ ಪುಸ್ತಕ ಓದಲಿ: ವಿ.ಕೆ.ಸಿಂಗ್

2012 ಸೇನಾ ಪಡೆಯ ಅಸಹದ ಚಲನವಲನದ ವರದಿ ಸತ್ಯ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಅವರ ಹೇಳಿಕೆಯನ್ನು ತಿರಸ್ಕರಿಸಿರುವ ಭೂಸೇನೆಯ ಮಾಜಿ ಮುಖ್ಯಸ್ಥ...
ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಮತ್ತು ಭೂಸೇನೆಯ ಮಾಜಿ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ (ಸಂಗ್ರಹ ಚಿತ್ರ)
ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಮತ್ತು ಭೂಸೇನೆಯ ಮಾಜಿ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ (ಸಂಗ್ರಹ ಚಿತ್ರ)
Updated on: 

ಉಜ್ಜಯಿನಿ: 2012 ಸೇನಾ ಪಡೆಯ ಅಸಹಜ ಚಲನವಲನದ ವರದಿ ಸತ್ಯ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಅವರ ಹೇಳಿಕೆಯನ್ನು ತಿರಸ್ಕರಿಸಿರುವ ಭೂಸೇನೆಯ ಮಾಜಿ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರು, ಕೆಲಸವಿಲ್ಲದ ಮನೀಶ್ ತಿವಾರಿ ನನ್ನ ಪುಸ್ತಕವನ್ನು ಓದಲಿ ಎಂದು ಭಾನುವಾರ ಹೇಳಿದ್ದಾರೆ.

ಮನೀಶ್ ತಿವಾರಿ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ತಿವಾರಿ ಅವರಿಗೆ ಇತ್ತೀಚಿನ ದಿನಗಳಲ್ಲಿ ಮಾಡಲು ಯಾವುದೇ ಕೆಲವಿಲ್ಲ. ಈ ಕುರಿತು ನಾನು ಪುಸ್ತಕವೊಂದನ್ನು ಬರೆದಿದ್ದೇನೆ. ಅದನ್ನು ತಿವಾರಿಯವರಿಗೆ ಓದಲು ಹೇಳಿ. ಪುಸ್ತಕ ಓದಿದ ನಂತರ ಎಲ್ಲವೂ ಅವರಿಗೆ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ವಿ.ಕೆ.ಸಿಂಗ್ ಅವರು ಅವರ ಜೀವನಾಧಾರಿತ ಆತ್ಮಚರಿತ್ರೆ ಕರೇಜ್ ಮತ್ತು ಕನ್ವಿಕ್ಷನ್ (ಧೈರ್ಯ ಮತ್ತು ಅಪರಾಧ ನಿರ್ಣಯ) ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಪುಸ್ತಕದಲ್ಲಿ ಅವರ ಅನುಭವ, ಹಾಗೂ ಸಂದಿಗ್ಧ ಪರಿಸ್ಥಿತಿ, ಭಾರತ ಸರ್ಕಾರದ ನಡೆದಿರುವ ಭ್ರಷ್ಟಾಚಾರ ಹಾಗೂ ಆಪರೇಷನ್ ಬ್ಲ್ಯೂಸ್ಟಾರ್ ನಲ್ಲಿ ಇಂದಿರಾಗಾಂಧಿ ಅವರ ಪಾತ್ರ ಕುರಿತ ಹಲವು ವಿಚಾರಗಳ  ಕುರಿತಂತೆ ಮಾಹಿತಿಗಳನ್ನು ನೀಡಿದ್ದಾರೆ.

ಏನಿದು ಪ್ರಕರಣ?
2012 ರ ಅವಧಿಯಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ವಿ.ಕೆ. ಸಿಂಗ್ ಅವರು ಅವರ ಅಧಿಕಾರಾವಧಿಯಲ್ಲಿ ಹರ್ಯಾಣಾದ ಹಿಸಾರ್ ನಿಂದ ದೆಹಲಿಯಲ್ಲಿ 33ನೇ ಸಶಸ್ತ್ರ ವಿಭಾಗದ ಸೈನಿಕರು ಜ.16ರಂದು ಅಸಹಜ ರೀತಿಯಲ್ಲಿ ಹೊರಟಿದ್ದರು ಎಂದು ಕೇಂದ್ರೀಯ ಗುಪ್ತಚರ ಸಂಸ್ಥೆಗಳು ವರದಿ ಮಾಡಿದೆ ಎಂದು ಏಪ್ರಿಲ್ 4 ರಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿತ್ತು. ಸಿಂಗ್ ಅವರು ತಮ್ಮ ಜನ್ಮ ದಿನಾಂಕ ವಿವಾದ ಕುರಿತಂತೆ ಆ ದಿನ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಈ ವರದಿಗಳನ್ನು ಅಂದಿನ ಸರ್ಕಾರ ಅಲ್ಲಗೆಳೆದಿತ್ತು. ಅಲ್ಲದೆ, ಸರ್ಕಾರ ಬೀಳಿಸಲು ಇದೊಂದು ಕ್ಷಿಪ್ರಕ್ರಾಂತಿ ಯತ್ನ ಎಂಬ ಮಾತುಗಳು ಕೇಳಿಬಂದಿದ್ದವು.

ಇದೀಗ ಇದೇ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಿವಾರಿ ಅವರು, ಅಂದು ನಾನು ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿ ಸದಸ್ಯನಾಗಿದ್ದೆ. ಸೇನೆಯ ಅಸಹಜ ಚಲನವಲನ ನಿಜಕ್ಕೂ ದುರದೃಷ್ಟಕರವಾದದ್ದು, ಆದರೂ ಆ ವರದಿ ಸತ್ಯವಾಗಿತ್ತು. ನಿಜವಾಗಿತ್ತು. ನನಗೆ ವಿವಾದಗಳನ್ನು ಸೃಷ್ಟಿಸುವುದು ಇಷ್ಟವಿರಲಿಲ್ಲ. ರಕ್ಷಣಾ ಸ್ಥಾಯಿ ಸಮಿತಿಯನ್ನು ಸಮರ್ಥಿಸಿಕೊಳ್ಳಬೇಕಿತ್ತು. ನನಗೆ ತಿಳಿದಿರುವ, ಅರಿವಿರುವ ಪ್ರಕಾರ ಆ ವರದಿಗಳು ಸತ್ಯವಾಗಿವೆ ಎಂದು ಹೇಳಿದ್ದರು.

ತಿವಾರಿ ಅವರ ಈ ಹೇಳಿಕೆ ವಿ.ಕೆ.ಸಿಂಗ್ ಅವರ ಕಣ್ಣು ಕೆಂಪಗಾಗುವಂತೆ ಮಾಡಿದ್ದು, ಪತ್ರಿಕೆಯ  ಸೇನಾಪಡೆಯ ಅಸಹಜ ಚಲನವಲನ ವರದಿ ತಲೆಬುಡವಿಲ್ಲದ್ದು, ಇದಾವುದೂ ಸತ್ಯವಲ್ಲ. ತಿವಾರಿಯವರಿಗೆ ಮಾಡಲು ಕೆಲಸವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com