

ನವದೆಹಲಿ: ಸರ್ಕಾರದ ಯೋಜನೆ, ಸಂಸ್ಥೆಗಳಿಗೆ ಸಂ ಬಂಧಿಸಿದ ಅನಗತ್ಯ ದೂರುಗಳನ್ನು ಕಡಿಮೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ ಸಾರ್ವಜನಿಕರ ಕುಂದುಕೊರೆತೆಗಳನ್ನು ಆನ್‍ಲೈನ್ ಮೂಲಕ ದಾಖಲಿಸುವಾಗ ಆಧಾರ್ ಸಂಖ್ಯೆ ಯನ್ನೂ ದಾಖಲೆ ಕಡ್ಡಾಯಗೊಳಿಸಿದೆ.
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಗಳ ಇಲಾಖೆ ಈ ನಿರ್ಧಾರ ಕೈಗೊಂಡಿದ್ದು, www.pgportal. nic.in ಮೂಲಕ ದೂ ರು ಗಳ ನ್ನು ದಾಖಲಿಸಲು ಅವಕಾಶ ಕಲ್ಪಿಸಿದೆ. ಸರ್ಕಾರದ ಯಾವುದೇ ಸಂಸ್ಥೆಯ ವಿರುದ್ಧ ನಾಗರಿಕರು ಸಕಾರಣದೊಂದಿಗೆ ದೂರು ನೀಡಬಹುದು. ಸರ್ಕಾರಿ ಸಂಸ್ಥೆಗಳ ವಿರುದ್ಧದ ಬಹುಪಾಲು ದೂರುಗಳು ದುರುದ್ದೇಶ ಪೂರಿತವಾಗಿರುತ್ತಿದ್ದವು. ಅದನ್ನು ಕಡಿಮೆಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.