ಸೆಲ್ಫಿ ಕ್ರೇಜ್ ಗೆ ಬಲಿಯಾಯ್ತು ಯುವಕನ ಜೀವ

ಸ್ನೇಹಿತರೊಂದಿಗೆ ರಾಜಸ್ಥಾನದ ಮೆಹರಾನ್​ಗಢಗೆ ತೆರಳಿದ್ದ 23 ವರ್ಷದ ನಿಖಿಲ್ ಪ್ರಜಾಪತಿ ಎಂಬ ಯುವಕ ಸೆಲ್ಫಿ ತೆಗೆಯುವ ಆತುರದಲ್ಲಿ ಕಾಲುಜಾರಿ 400 ಅಡಿ ಆಳಕ್ಕೆ ಬಿದ್ದು...
ಮೆಹರಾನ್​ಗಢ ಕೋಟೆ
ಮೆಹರಾನ್​ಗಢ ಕೋಟೆ
Updated on: 

ಜೋದ್​ಪುರ: ಸ್ನೇಹಿತರೊಂದಿಗೆ ರಾಜಸ್ಥಾನದ ಮೆಹರಾನ್​ಗಢಗೆ ತೆರಳಿದ್ದ 23 ವರ್ಷದ ನಿಖಿಲ್ ಪ್ರಜಾಪತಿ ಎಂಬ ಯುವಕ ಸೆಲ್ಫಿ ತೆಗೆಯುವ ಆತುರದಲ್ಲಿ ಕಾಲುಜಾರಿ 400 ಅಡಿ ಆಳಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

ರಾಜಸ್ಥಾನದ ಕೋಟೆ ಮೇಲೆ ಒಬ್ಬನೇ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಪ್ರಪಾತಕ್ಕೆ ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಬೇಲಿ ದಾಟಿದ ಯುವಕ ಮುಂದಕ್ಕೆ ಸಾಗಿ ಸೆಲ್ಫಿ ತೆಗೆಯವಾಗ ಕಾಲು ಜಾರಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com