ಭಾರತದಲ್ಲಿ ಹೆಚ್ಚಿದ ಸಕ್ಕರೆ ಉತ್ಪಾದನೆ

ಪ್ರಸಕ್ತ ಸಕ್ಕರೆ ವರ್ಷದಲ್ಲಿ ಜನವರಿ 15ರವರೆಗೆ ದೇಶದ ಸಕ್ಕರೆ ಉತ್ಪಾದನೆ ಶೇ.7ರಷ್ಟು ಏರಿಕೆ ಕಂಡಿದ್ದು 110.90 ಲಕ್ಷ ಟನ್‍ಗೆ ತಲುಪಿದೆ...
ಭಾರತದಲ್ಲಿ ಹೆಚ್ಚಿದ ಸಕ್ಕರೆ ಉತ್ಪಾದನೆ (ಸಂಗ್ರಹ ಚಿತ್ರ)
ಭಾರತದಲ್ಲಿ ಹೆಚ್ಚಿದ ಸಕ್ಕರೆ ಉತ್ಪಾದನೆ (ಸಂಗ್ರಹ ಚಿತ್ರ)

ನವದೆಹಲಿ: ಪ್ರಸಕ್ತ ಸಕ್ಕರೆ ವರ್ಷದಲ್ಲಿ ಜನವರಿ 15ರವರೆಗೆ ದೇಶದ ಸಕ್ಕರೆ ಉತ್ಪಾದನೆ ಶೇ.7ರಷ್ಟು ಏರಿಕೆ ಕಂಡಿದ್ದು 110.90 ಲಕ್ಷ ಟನ್‍ಗೆ ತಲುಪಿದೆ.

ದೇಶದಲ್ಲಿನ ಸಕ್ಕರೆ ಕಾರ್ಖಾನೆಗಳು ಇದುವರೆಗೂ 9 ಲಕ್ಷ ಟನ್ ರಫ್ತಿಗೆ ಮಾತ್ರ ಆರ್ಡರ್‍ಗಳನ್ನು ಪಡೆದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಬ್ಬು ಲಭ್ಯತೆ ಕಡಿಮೆ ಇದ್ದರೂ ಕಾರ್ಖಾನೆಗಳು  ಈ ವರ್ಷದ ಆರಂಭದಿಂದಲೇ ನುರಿಯುವಿಕೆ ಆರಂಭಿಸಿದವು. ಆದರೆ ಇದುವರೆಗೆ ಉತ್ಪಾದನೆಯಾಗಿರುವ ಸಕ್ಕರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಭಾರತೀಯ  ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಇಸ್ಮಾ) ಹೇಳಿದೆ. ಈ ವರ್ಷವೂ ದೇಶದಲ್ಲಿ 26ರಿಂದ 27 ದಶಲಕ್ಷ ಟನ್ ಸಕ್ಕರೆ ಹೆಚ್ಚು ಉತ್ಪಾದನೆಯಾಗುವ ಅಂದಾಜುಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com