ಮೇಡಂ ತುಸಾಡ್ ಮ್ಯೂಸಿಯಂನಲ್ಲಿ ಅರವಿಂದ್ ಕೇಜ್ರಿವಾಲ್ ಮೇಣದ ಪ್ರತಿಮೆ?

ಹಲವು ಬಾಲಿವುಡ್ ದಿಗ್ಗಜರ ನಂತರ ಇದೀಗ ಲಂಡನ್ ನ ಮೇಡಮ್ ತುಸಾಡ್ ಮ್ಯೂಸಿಯಂನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಾವ್ ಅವರ ಮೇಣದ ಪ್ರತಿಮೆ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on: 
ನವದೆಹಲಿ: ಹಲವು ಬಾಲಿವುಡ್ ದಿಗ್ಗಜರ ನಂತರ ಇದೀಗ ಲಂಡನ್ ನ ಮೇಡಮ್ ತುಸಾಡ್ ಮ್ಯೂಸಿಯಂನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಾವ್ ಅವರ ಮೇಣದ ಪ್ರತಿಮೆ ನಿರ್ಮಿಸುವ ಸಾಧ್ಯತೆ ಇದೆ. ಒಂದು ವೇಳೆ ಮಫ್ಲರ್ ಮ್ಯಾನ್ ಪ್ರತಿಮೆ ನಿರ್ಮಾಣವಾದರೆ ಬ್ರಿಟನ್ ನ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಮುಖ್ಯಮಂತ್ರಿ ಎಂಬ ಖ್ಯಾತಿ ಗಳಿಸಲಿದ್ದಾರೆ.
ಈ ಸಂಬಂಧ ಜನವರಿ 11ರಂದು ಮೇಡಮ್ ತುಸಾಡ್ ಮ್ಯೂಸಿಯಂನ ಪಾಲುದಾರ ಸಂಸ್ಥೆ ದಿ ವಿಜ್ ಕ್ರಾಫ್ಟ್ ಎಂಟರ್ ಟೈನ್ ಮೆಂಟ್ ಸಂಸ್ಥೆ ದೆಹಲಿ ಸಿಎಂಗೆ ಪತ್ರ ಬರೆದಿದ್ದು, ಆಹ್ವಾನ ಸ್ವೀಕರಿಸುವಂತೆ ಮನವಿ ಮಾಡಿದೆ.
ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಮ್ಯೂಸಿಯಂ ಗೌರವಿಸಲು ನಿರ್ಧಿಸಿದೆ ಎಂದು ವಿಜ್ ಕ್ರಾಫ್ಟ್ ಹೇಳಿಕೊಂಡಿದೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಅವರು ಒಪ್ಪಿಗೆ ಸೂಚಿಸಿದ್ದೇ ಆದರೆ, ಫ್ರೆಬ್ರುವರಿ ತಿಂಗಳಲ್ಲಿ ಮೇಣದ ಪ್ರತಿಮೆ ನಿರ್ಮಾಣ ಕಾರ್ಯಾ ಆರಂಭವಾಗಲಿದೆ ಎಂದು ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com