ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯಿಂದ ಬಂಧನಕ್ಕೊಳಗಾಗಿರುವ ಅನ್ಸರ್ ಉಲ್ ತ್ವಹೀದ್ ಸಂಘಟನೆಯ 14 ಶಂಕಿತ ಉಗ್ರರ ವಿಚಾರಣೆ ವೇಳೆ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಜನನಿಬಿಡ ಪ್ರದೇಶ. ಮಾರುಕಟ್ಟೆ ಸ್ಥಳಗಳಲ್ಲಿ ದಾಳಿ ನಡೆಸುವುದನ್ನು ಬಿಟ್ಟು ಇನ್ನು ಮುಂದೆ ರಾಜಕಾರಣಿಗಳು, ಪ್ರಮುಖ ಕಟ್ಟಡಗಳು, ಆಯಕಟ್ಟಿನ ಪ್ರದೇಶಗಳು, ವಿದೇಶಿಯರು ಮತ್ತು ಸರ್ಕಾರದ ಆಡಳಿತ ಯಂತ್ರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಅವರಿಗೆ ಐಎಸ್ ಉಗ್ರ ಸಂಘಟನೆಯ ಸದಸ್ಯರು ನಿರ್ದೇಶನ ನೀಡಿದ್ದರು ಎಂಬ ಸಂಗತಿ ಬಯಲಾಗಿದೆ.