ಎಡಿಜಿಪಿ ಶ್ರೇಣಿಯ ಅಧಿಕಾರಿಯಿಂದ 29 ವರ್ಷಗಳಿಂದ ಕಿರುಕುಳ: ಕೇರಳ ಮಹಿಳಾ ಐಪಿಎಸ್ ಅಧಿಕಾರಿ

ಕಳೆದ 29 ವರ್ಷಗಳಿಂದ ಕೇರಳ ಸಾರಿಗೆ ಆಯುಕ್ತರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕೇರಳದ ಪ್ರಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಆರ್. ಶ್ರೀಲೇಖಾ ...
ಶ್ರೀಲೇಖಾ
ಶ್ರೀಲೇಖಾ
Updated on: 

ತಿರುವನಂತಪುರ: ಕಳೆದ 29 ವರ್ಷಗಳಿಂದ ಕೇರಳ ಸಾರಿಗೆ ಆಯುಕ್ತರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕೇರಳದ ಪ್ರಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಆರ್. ಶ್ರೀಲೇಖಾ ಆರೋಪಿಸಿದ್ದಾರೆ.

ಈ ಸಂಬಂಧ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುರಕೊಂಡಿರುವ ಕೇರಳ ರಾಜ್ಯ ಅಪರಾಧ ದಾಖಲೆ ಬ್ಯೂರೊ ಅಧಿಕಾರಿ ಆರ್ ಶ್ರೀಲೇಖಾ ಎಡಿಜಿಪಿ ರ್ಯಾಂಕಿಂಗ್ ಶ್ರೇಣಿಯಲ್ಲಿ ರುವ ಸಾರಿಗೆ ಆಯುಕ್ತ ಟಾಮಿನ್ ತ್ಯಾಚಂಕರಿ ನನಗೆ ಹಲವು ಬಾರಿ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ.

ತೆರಿಗೆ ವಂಚನೆ ಪ್ರಕರಣದಲ್ಲಿ ತಮ್ಮ ವಿರುದ್ದ ಕಕೇಸು ದಾಖಲಾಗುವುದರ ಹಿಂದೆ ಥ್ಯಾಚಂಕರೆ ಕೈವಾಡವಿದೆ ಎಂದು ಹೇಳಿದ್ದಾರೆ.

ಥ್ಯಾಚಂಕರೆಯೇ ಮುಂದೆ ನಿಂತು ತ್ರಿಶೂರ್ ವಿಚಕ್ಷಣಾ ದಳದಿಂದ ತಮ್ಮ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ ಎಂದು ದೂರಿದ್ದಾರೆ. ತಮಗೆ ನೀಡುವ ಪ್ರಮೋಷನ್ ಅನ್ನು ಕೂಡ ತಡೆ ಹಿಡಿಯಲು ಯತ್ನಿಸಿದ್ದಾರೆ ಎಂದು ಆಪಾದಿಸಿದ್ದಾರೆ.

ಥ್ಯಾಚಂಕರೆಯ ಕಿರುಕುಳದಿಂದ ತಾವು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com