ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಲು ಚೀನಾ ಕಾರಣ: ಭಾರತ ಸರ್ಕಾರ

ಎನ್ ಎಸ್ ಜಿ ಸದಸ್ಯತ್ವ ಕೈತಪ್ಪುವ ವಿಷಯದಲ್ಲಿ ಈ ವರೆಗೂ ಚೀನಾ ವಿರುದ್ಧ ಆರೋಪ ಮಾಡದೇ ಇದ್ದ ಭಾರತ ಸರ್ಕಾರ ಈಗ ಸದಸ್ಯತ್ವ ಕೈತಪ್ಪುವುದಕ್ಕೆ ಚೀನಾ ಅಡ್ಡಗಾಲು ಹಾಕಿದ್ದೆ ಕಾರಣ ಎಂದು ಸ್ಪಷ್ಟವಾಗಿ ತಿಳಿಸಿದೆ.
ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್
ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್
Updated on: 

ನವದೆಹಲಿ: ಎನ್ ಎಸ್ ಜಿ ಸದಸ್ಯತ್ವ ಕೈತಪ್ಪುವ ವಿಷಯದಲ್ಲಿ ಈ ವರೆಗೂ ಚೀನಾ ವಿರುದ್ಧ ಆರೋಪ ಮಾಡದೇ ಇದ್ದ ಭಾರತ ಸರ್ಕಾರ ಈಗ ಸದಸ್ಯತ್ವ ಕೈತಪ್ಪುವುದಕ್ಕೆ ಚೀನಾ ಅಡ್ಡಗಾಲು ಹಾಕಿದ್ದೆ ಕಾರಣ ಎಂದು ಸ್ಪಷ್ಟವಾಗಿ ತಿಳಿಸಿದೆ.

48 ಸದಸ್ಯತ್ವ ರಾಷ್ಟ್ರಗಳ ಪೈಕಿ ಬಹುತೇಕ ರಾಷ್ಟ್ರಗಳು ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡಿದ್ದವಾದರೂ ಚೀನಾ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಪಡೆಯುವುದಕ್ಕೆ ಸಾಧ್ಯವಾಗಿಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಪರಮಾಣು ಪೂರೈಕೆದಾರ ಸಮೂಹಕ್ಕೆ ಸೇರ್ಪಡೆಗೊಳ್ಳುವ ವಿಚಾರವಾಗಿ ಎಲ್ಲಾ 48 ರಾಷ್ಟ್ರಗಳ ಜೊತೆಗೆ ಭಾರತ ಸರ್ಕಾರ ಯಶಸ್ವಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿತ್ತು. ಸಿಯೋಲ್ ನಲ್ಲಿ ನಡೆದ ಸಭೆಯ ಅಂತಿಮ ಹಂತದಲ್ಲಿ ಚೀನಾ ಮಾತ್ರ ಭಾರತದ ಸದಸ್ಯತ್ವಕ್ಕೆ ವಿರೋಧ ವ್ಯಕ್ತಪಡಿಸಿತ್ತು ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

ಚೀನಾ ಹೊರತಾಗಿ ಕೆಲವು ರಾಷ್ಟ್ರಗಳು ಹೊಸ ಸದಸ್ಯ ರಾಷ್ಟ್ರಗಳ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸಿದ್ದವೇ ಹೊರತು ಭಾರತದ ಸದಸ್ಯತ್ವಕ್ಕೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಹೊಸ ಸದಸ್ಯ ರಾಷ್ಟ್ರಗಳ ಸೇರ್ಪಡೆ ಪ್ರಕ್ರಿಯೆ ಬಗ್ಗೆ ವಿಷಯ ಪ್ರಸ್ತಾಪಿಸಿದ್ದು ಭಾರತ ಸದಸ್ಯತ್ವ ಕಳೆದುಕೊಳ್ಳುವುದಕ್ಕೆ ಕಾರಣವಲ್ಲ ಎಂದು ವಿಕಾಸ್ ಸ್ವರೂಪ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com