ಹಿಜ್ಬುಲ್ ಕಮಾಂಡರ್ ವಾನಿ ಹತ್ಯೆ; ಕಾಶ್ಮೀರದಲ್ಲಿ ಅಘೋಷಿತ ನಿಷೇಧಾಜ್ಞೆ!

ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಕಮಾ೦ಡರ್ ಬುರ್ಹಾನ್ ಮುಜಾಫರ್ ವಾನಿ ಹತ್ಯೆ ಬೆನ್ನಲ್ಲೇ ಕಾಶ್ಮೀರ ಉದ್ವಿಗ್ನವಾಗಿದ್ದು, ರಾಜಧಾನಿ ಶ್ರೀನಗರ ಸೇರಿದಂತೆ ಕಣಿವೆ ರಾಜ್ಯದಲ್ಲಿ ಅಘೋಷಿತ ನಿಷೇಧಾಜ್ಞೆ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಶ್ನೀರದಲ್ಲಿ ಅಘೋಷಿತ ನಿಷೇಧಾಜ್ಞೆ (ಸಂಗ್ರಹ ಚಿತ್ರ)
ಕಾಶ್ನೀರದಲ್ಲಿ ಅಘೋಷಿತ ನಿಷೇಧಾಜ್ಞೆ (ಸಂಗ್ರಹ ಚಿತ್ರ)
Updated on: 

ಶ್ರೀನಗರ: ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಕಮಾ೦ಡರ್ ಬುರ್ಹಾನ್ ಮುಜಾಫರ್ ವಾನಿ ಹತ್ಯೆ ಬೆನ್ನಲ್ಲೇ ಕಾಶ್ಮೀರ ಉದ್ವಿಗ್ನವಾಗಿದ್ದು, ರಾಜಧಾನಿ ಶ್ರೀನಗರ ಸೇರಿದಂತೆ ಕಣಿವೆ ರಾಜ್ಯದಲ್ಲಿ ಅಘೋಷಿತ ನಿಷೇಧಾಜ್ಞೆ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯ ಯುವಕರನ್ನು ಭಯೋತ್ಪಾದನೆದೆ ಸೆಳೆಯುವ ಕಾರ್ಯ ಮಾಡುತ್ತಿದ್ದ ಬುರ್ಹಾನ್ ವಾನಿಯನ್ನು ಜಮ್ಮು- ಕಾಶ್ಮೀರದ ಅನ೦ತ್‍ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಶುಕ್ರವಾರ ಎನ್  ಕೌಂಟರ್ ಮಾಡಿದ್ದವು. ಈ ಘಟನೆ ಬೆನ್ನಲ್ಲೇ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪುಲ್ವಾಮಾ, ಶ್ರೀನಗರ, ಜಮ್ಮು, ಅನಂತನಾಗ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಘೋಷಿತ ನಿಷೇಧಾಜ್ಞೆ ಪರಿಸ್ಥಿತಿ ನಿರ್ಮಾಣವಾಗಿದೆ.

ಮೂಲಗಳ ಪ್ರಕಾರ  ಶ್ರೀನಗರ, ಜಮ್ಮು, ಅನಂತನಾಗ್ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ದಂಡೇ ನೆರೆದಿದ್ದು, ತುರ್ತು ಪ್ರಹಾರ ದಳ, ಅಶ್ರುವಾಯು ದಳ, ಸಿಆರ್ ಪಿಎಫ್ ಯೋಧರು, ಅರೆಸೇನಾ  ಯೋಧರು ಯಾವುದೇ ಪರಿಸ್ಥಿತಿ ನಿಯಂತ್ರಿಸಲು ಸಜ್ಜಾಗಿ ನಿಂತಿದ್ದಾರೆ. ಅಲ್ಲದೆ ಈ ಪ್ರಮುಖ ನಾಲ್ಕು ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಮೊಬೈಲ್ ನೆಟ್ ವರ್ಕ್  ಸೇವೆ ಕೂಡ ಬಹುತೇಕ ಸ್ಥಗಿತವಾಗಿದೆ.

ಯಾತ್ರೆಗಳು ಸ್ಥಗಿತ

ಇನ್ನು ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನಲೆಯಲ್ಲಿ ಈ ಮಾರ್ಗವಾಗಿ ಸಂಚರಿಸಲಿರುವ ಪವಿತ್ರ ಯಾತ್ರೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಮರನಾಥ ಯಾತ್ರೆ  ಉಗ್ರರ ದಾಳಿ ಎಚ್ಚರಿಕೆ ಬೆನ್ನಲ್ಲೇ ಹಿಜ್ಬುಲ್ ಕಮಾಂಡರ್ ನ ಹತ್ಯೆ ಪರಿಸ್ಥಿತಿಯನ್ನು ಮತ್ತೆ ಕೈ ಮೀರುವಂತೆ ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ರೈಲು ಸೇವೆಗಳನ್ನು ಕೂಡ  ಸ್ಥಗಿತಗೊಳಿಸಲಾಗಿದೆ. ವೈಷ್ಣೋದೇವಿ ಯಾತ್ರೆಗೆ ತೆರಳುವ ಮಾರ್ಗ ಸ್ಥಗಿತಕೊಂಡ ಹಿನ್ನಲೆಯಲ್ಲಿ ಯಾತ್ರಾರ್ಥಿಗಳು ಮತ್ತು ಭಕ್ತರು ಪರದಾಡುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com