ಮಧ್ಯಪ್ರದೇಶದಲ್ಲಿ ಮಹಾಮಳೆ; ಪ್ರವಾಹಕ್ಕೆ ಮತ್ತೆ ಏಳು ಬಲಿ, ಸಾವಿನ ಸಂಖ್ಯೆ 22ಕ್ಕೇರಿಕೆ

ಭಾನುವಾರ ಬೆಳಗ್ಗೆಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ ಪ್ರವಾಹ ವಾತಾವರಣ ನಿರ್ಮಾಣವಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 7 ಮಂದಿ ಸಾವನ್ನಪ್ಪಿ, 9 ಮಂದಿ ಕಾಣೆಯಾಗಿದ್ದಾರೆ..
ಮಧ್ಯ ಪ್ರದೇಶದಲ್ಲಿ ಪ್ರವಾಹ (ಸಂಗ್ರಹ ಚಿತ್ರ)
ಮಧ್ಯ ಪ್ರದೇಶದಲ್ಲಿ ಪ್ರವಾಹ (ಸಂಗ್ರಹ ಚಿತ್ರ)
Updated on: 

ಭೋಪಾಲ್: ಭಾನುವಾರ ಬೆಳಗ್ಗೆಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ ಪ್ರವಾಹ ವಾತಾವರಣ ನಿರ್ಮಾಣವಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ  ಬರೊಬ್ಬರಿ 7 ಮಂದಿ ಸಾವನ್ನಪ್ಪಿ, 9 ಮಂದಿ ಕಾಣೆಯಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಉಂಟಾಗಿರುವ ಪ್ರಹಾವದಿಂದಾಗಿ ಈ ವರೆಗೂ  ಸಾವನ್ನಪ್ಪಿದವರ ಸಂಖ್ಯೆ 22ಕ್ಕೇ ಏರಿಕೆಯಾಗಿದೆ. ಭೋಪಾಲ್, ಜಬಲ್ ಪುರ, ವಿದಿಶಾ, ರೈಸನ್, ರೇವಾ ಪ್ರದೇಶಗಳಲ್ಲಿ ಭಾರಿ  ಮಳೆ ಸುರಿಯುತ್ತಿದ್ದು, ರಾಜ್ಯ ಎಲ್ಲ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಇನ್ನು ಪ್ರವಾಹದಿಂದಾಗಿ ಈ ವರೆಗೂ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದು, ರಾಷ್ಟ್ರೀಯ  ವಿಪತ್ತು ನಿರ್ವಹಣ ಸಿಂಬ್ಬಂದಿಗಳ ಸತತ ಕಾರ್ಯಾಚರಣೆ ಪರಿಣಾಮ ಈ ವರೆಗೂ ಸುಮಾರು 7.500ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ. ಈ ಪೈಕಿ 9 ಮಂದಿ

ಈ ಎಲ್ಲ ನಿರಾಶ್ರಿತರಿಗಾಗಿ ಸುರಕ್ಷಿತ ಪ್ರದೇಶಗಳಲ್ಲಿ 70ಕ್ಕೂ ಹೆಚ್ಚು ನಿರಾಶ್ರಿತ ಕ್ಯಾಂಪ್ ಗಳನ್ನು ನಿರ್ಮಿಸಲಾಗಿದ್ದು, ಈ ವರೆಗೂ ಸುಮಾರು 17 ಸಾವಿರಕ್ಕೂ ಅಧಿಕ ಮಂದಿ ಈ ಕ್ಯಾಂಪ್ ಗಳಲ್ಲಿ  ಆಶ್ರಯ ಪಡೆದಿದ್ದಾರೆ. ಭೀಕರ ಪ್ರವಾಹ ಮತ್ತು ಭಾರಿ ಮಳೆಯಿಂದಾಗಿ ಜಬಲ್ ಪುರ, ವಿದಿಶಾ, ರೈಸನ್, ರೇವಾದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮನೆಗಳು ನಾಶವಾಗಿದ್ದು, ಅಪಾರ  ಪ್ರಮಾಣದ ಆಸ್ತಿ-ಪಾಸ್ತಿ ನಷ್ಟಉಂಟಾಗಿದೆ.

ಉತ್ತರ ಪ್ರದೇಶದ ವಾರಾಣಸಿಯಲ್ಲೂ ಸತತ ಮಳೆಯಾಗುತ್ತಿರುವ ಪರಿಣಾಮ ಸಾಕಷ್ಟು ಮಳೆ ಸುರಿಯುತ್ತಿದ್ದು, ಗ೦ಗಾನದಿ ಉಕ್ಕಿ ಹರಿಯುತ್ತಿದೆ. ಅಣೆಕಟ್ಟುಗಳಲ್ಲಿ ನದಿ ನೀರು ಅಪಾಯದ ಮಟ್ಟ  ಮೀರಿ ಹರಿಯುತ್ತಿದ್ದು, ಬರೊಬ್ಬರಿ 7 ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

24 ಗಂಟೆಯೊಳಗೆ ಭಾರಿ ಮಳೆ ಸಾಧ್ಯತೆ
ಕೇಂದ್ರ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿರುವಂತೆ ಮುಂದಿನ 24 ಗಂಟೆಗಳೊಳಗೆ ಮಧ್ಯಪ್ರದೇಶದಲ್ಲಿ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದೆ. ಮಧ್ಯ  ಪ್ರದೇಶದ ಗುನಾ, ನೀಮುಚ್, ಮಂಡ್ಸಾರ್, ರತ್ಲಂ, ಉಜ್ಜೈನಿ, ಶಾಜಾಪುರ, ರಾಜ್ ಘಡ, ಸೆಹೊರ್ ಮತ್ತು ಅಗರ್-ಮಾಲ್ವಾ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ  ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com