

ಪಂಜಾಬ್: ಗಡಿ ಪ್ರದೇಶದಲ್ಲಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಮಾದಕದ್ರವ್ಯ ಹೆರಾಯಿನ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಇಬ್ಬರು ಪಾಕಿಸ್ತಾನಿ ವ್ಯಕ್ತಿಗಳನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ.
ಪಂಬಾಬಿನ ಫಾಕಿಜಾ ಗಡಿಯಲ್ಲಿ ಬೆಳಗಿನ ಜಾವ ಭಾರತಕ್ಕೆ ನುಸುಳತ್ನೆಸಿದ ಮೂರು ಜನರ ಪೈಕಿ ಇಬ್ಬರನ್ನು ಬಿಎಸ್ಎಫ್ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮತ್ತೋರ್ವನಿಗೆ ಗಾಯವಾಗಿದೆ.
ಮೃತರ ಬಳಿಯಿಂದ 15 ಪ್ಯಾಕೆಟ್ ಮಾದಕದ್ರವ್ಯದ ಜತೆ ಪಿಸ್ತೂಲು, ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಗಾಯಗೊಂಡಿರುವ ಮತ್ತೊಬ್ಬ ಡ್ರಗ್ಸ್ ಕಳ್ಳಸಾಗಣೆದಾರನನ್ನು ಫರೀದ್ ಕೋಟ್ ನ ಗುರು ಗೋಬಿಂದ್ ಸಿಂಗ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ