

ನವದೆಹಲಿ: ರಾಜಧಾನಿ ದೆಹಲಿಯ ರೆಸ್ಟೋರೆಂಟ್ ಒಂದರಲ್ಲಿ ಬೀದಿ ಮಕ್ಕಳಿಗೆ ಪ್ರವೇಶ ನಿರಾಕರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ವರದಿಯನ್ನು ದೆಹಲಿ ಸರ್ಕಾರಕ್ಕೆ ಗುರುವಾರ ಸಲ್ಲಿಸಿದೆ.
ದೆಹಲಿಯ ಶಿವಸಾಗರ್ ಹೋಟೆಲ್ ಗೆ ಬಂದಿದ್ದ ಬೀದಿ ಮಕ್ಕಳಿಗೆ ರೆಸ್ಟೋರೆಂಟ್ ಸಿಬ್ಬಂದಿಗಳು ಆಹಾರ ನೀಡಲು ನಿರಾಕರಿಸಿದ್ದರು. ಅಲ್ಲದೆ, ಮಕ್ಕಳನ್ನು ಹೊರಗೆ ಹಾಕಲು ಯತ್ನಿಸಿದ್ದರು ಎಂದು ಹೇಳಿ ಸೋನಾಲಿ ಎಂಬ ಮಹಿಳೆ ಪ್ರಕರಣ ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಸರ್ಕಾರ ತನಿಖಾ ತಂಡವೊಂದನ್ನು ನೇಮಿಸಿ 24 ಗಂಟೆಗಳೊಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಇದರಂತೆ ದೆಹಲಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ತನಿಖಾ ತಂಡವು, ರೆಸ್ಟೋರೆಂಟ್ ಮಾನವಹಕ್ಕು ಹಾಗೂ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ತಿಳಿಸಿದೆ.