ಎಸ್'ಪಿ ನಾಯಕ ಫರೂಕ್ ಹಸ್ಸನ್ ಲುಂಗಿ ಡ್ಯಾನ್ಸ್: ವೈರಲ್ ಆಯ್ತು ವಿಡಿಯೋ

ಲುಂಗಿಯುಟ್ಟು ಅಶ್ಲೀಲವಾಗಿ ನೃತ್ಯ ಮಾಡಿದ್ದ ಸಮಾಜವಾದಿ ಪಕ್ಷದ ನಾಯಕ ಮೊಹಮ್ಮದ್ ಫರೂಕ್ ಹಸ್ಸನ್ ಅವರ ವಿಡಿಯೋ ಇದೀಗ ವೈರಲ್ ಆಗಿದೆ...
ಎಸ್'ಪಿ ನಾಯಕ ಫರೂಕ್ ಹಸ್ಸನ್ ರಿಂದ ಲುಂಗಿ ಡ್ಯಾನ್ಸ್
ಎಸ್'ಪಿ ನಾಯಕ ಫರೂಕ್ ಹಸ್ಸನ್ ರಿಂದ ಲುಂಗಿ ಡ್ಯಾನ್ಸ್

ಮೀರುತ್: ಲುಂಗಿಯುಟ್ಟು ಅಶ್ಲೀಲವಾಗಿ ನೃತ್ಯ ಮಾಡಿದ್ದ ಸಮಾಜವಾದಿ ಪಕ್ಷದ ನಾಯಕ ಮೊಹಮ್ಮದ್ ಫರೂಕ್ ಹಸ್ಸನ್ ಅವರ ವಿಡಿಯೋ ಇದೀಗ ವೈರಲ್ ಆಗಿದೆ.

ಹಸ್ಸನ್ ಅವರು ಉತ್ತರಪ್ರದೇಶ ಸರ್ಕಾರದ ಸಮಾಜವಾದಿ ಪಕ್ಷದ ಸಚಿವರಾಗಿದ್ದು, ಲುಂಗಿಯುಟ್ಟು ಅಶ್ಲೀಲವಾಗಿ ನೃತ್ಯ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ಅಲ್ಲದೆ, ವಿಡಿಯೋ ಕುರಿತು ನಾಯಕನ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದೆ.

ವಿಡಿಯೋದಲ್ಲಿ ಸಮಾಜವಾದಿ ಪಕ್ಷದ ನಾಯಕ ಲುಂಗಿಯನ್ನು ಬಿಟ್ಟು ಅಶ್ಲೀಲವಾಗಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

ವಿಡಿಯೋ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಹಸ್ಸನ್ ಅವರು, ನನ್ನ ವಿರುದ್ಧ ನಡೆದಿರುವ ಪಿತೂರಿ ಇದಾಗಿದೆ. ಕೆಲ ಯುವಕರು ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದು, ಹಣ ನೀಡುವಂತೆ ಕೇಳುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಈ ರೀತಿಯ ವಿಡಿಯೋ ಮಾಡಲಾಗಿದೆ. ಪಾಂಚ್ಲಿ ಪ್ರದೇಶದ ಯುವಕರು ಇದರ ಹಿಂದೆ ಇದ್ದಾರೆಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com