ಕಟ್ಟಡದಲ್ಲಿ ಬೆಂಕಿ ಅವಘಡ: 8 ಸಾವು

ಅಂದೇರಿ ಪ್ರದೇಶದ ಕಟ್ಟಡವೊಂದರಲ್ಲಿ ಗುರುವಾರ ಬೆಳಗ್ಗೆ ಉಂಟಾದ ಬೆಂಕಿ ಅವಘಡದಲ್ಲಿ ...
ಬೆಂಕಿ ಹತ್ತಿ ಉರಿದ ಕಟ್ಟಡ
ಬೆಂಕಿ ಹತ್ತಿ ಉರಿದ ಕಟ್ಟಡ
Updated on
ಮುಂಬೈ: ಅಂದೇರಿ ಪ್ರದೇಶದ ಕಟ್ಟಡವೊಂದರಲ್ಲಿ ಗುರುವಾರ ಬೆಳಗ್ಗೆ ಉಂಟಾದ ಬೆಂಕಿ ಅವಘಡದಲ್ಲಿ 8 ಜನ ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಗಾಯವಾಗಿದೆ.

ಇಂದು ಬೆಳಗ್ಗೆ 5.15ರ ಸುಮಾರಿಗೆ ಅಂದೇರಿ ಉಪನಗರದ ಜುಹಿ ಗಲ್ಲಿಯಲ್ಲಿರುವ ಮೊದಲ ಮಹಡಿಯಲ್ಲಿ ವಾಫಾ ಮೆಡಿಕಲ್ ಶಾಪ್ ವೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿ ಉರಿಯತೊಡಗಿತು. ಆಗ ಕಟ್ಟಡದೊಳಗೆ ನಿದ್ದೆ ಮಾಡುತ್ತಿದ್ದ 8 ಮಂದಿ ಸಾವನ್ನಪ್ಪಿದ್ದು, ಒಬ್ಬರಿಗೆ ಗಾಯವಾಗಿದೆ ಎಂದು ಮುಂಬೈ ಪೊಲೀಸ್ ವಕ್ತಾರ ಅಶೋಕ್ ದುದೆ ತಿಳಿಸಿದ್ದಾರೆ.

ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬದವರು ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.

ಮಾಹಿತಿ ಬಂದ ಕೂಡಲೇ ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿತು. ಔಷಧಾಲಯದಲ್ಲಿ ಇಟ್ಟಿದ್ದ ಸಿಲೆಂಡರ್ ಸೋರಿಕೆಯಾಗಿ ಬೆಂಕಿ ಸ್ಪೋಟವುಂಟಾಗಿರಬಹುದು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬರಬೇಕಷ್ಟೆ. ಇದೀಗ ಅಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com