ನಾಪತ್ತೆಯಾಗಿದ್ದ ವಸ್ತ್ರ ವಿನ್ಯಾಸಕಿ ಶಿಪ್ರಾ ಗುರಗಾಂವ್ ನಲ್ಲಿ ಪತ್ತೆ

ಕಳೆದ ಫೆಬ್ರವರಿ 29ರಂದು ನಾಪತ್ತೆಯಾಗಿದ್ದ ವಸ್ತ್ರ ವಿನ್ಯಾಸಕಿ ಶಿಪ್ರಾ ಮಾಲಿಕ್ ಗುರಗಾಂವ್ ನಲ್ಲಿ ಪತ್ತೆಯಾಗಿದ್ದಾರೆ...
ಶಿಪ್ರಾ ಮಲಿಕ್
ಶಿಪ್ರಾ ಮಲಿಕ್

ನೋಯ್ಡಾ: ಕಳೆದ ಫೆಬ್ರವರಿ 29ರಂದು ನಾಪತ್ತೆಯಾಗಿದ್ದ ವಸ್ತ್ರ ವಿನ್ಯಾಸಕಿ ಶಿಪ್ರಾ ಮಲಿಕ್ ಗುರಗಾಂವ್ ನಲ್ಲಿ ಪತ್ತೆಯಾಗಿದ್ದಾರೆ.

ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ 29 ವರ್ಷದ ಶಿಪ್ರಾ ಮಲಿಕ್ ಅವರು ಗುರಗಾಂವ್ ನಲ್ಲಿ ಪತ್ತೆಯಾಗಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿ ನಾಪತ್ತೆಯಾಗಿದ್ದ ಎರಡನೇ ಪ್ರಕರಣ. ಇದಕ್ಕೂ ಮುನ್ನ ಸ್ನಾಪ್ ಡೀಲ್ ಮಹಿಳಾ ಉದ್ಯೋಗಿ ದೀಪ್ತಿ ನಾಪತ್ತೆಯಾಗಿದ್ದರು. ಅದೇ ರೀತಿ ಶಿಪ್ರಾ ಮಲಿಕ್ ಸಹ ನಾಪತ್ತೆಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೆ ಪತ್ತೆಯಾಗಿದ್ದಾರೆ.

ಶಿಪ್ರಾ ದೆಹಲಿಯ ಸೆಕ್ಟರ್ 37ರಲ್ಲಿ ವಾಸವಾಗಿದ್ದು, ಶಾಪಿಂಗ್ ಮಾಡಲು ತೆರಳಿದ್ದ ಆಕೆ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com