ಬೆಳಗ್ಗೆ ಸೂರ್ಯೋದಯದ ವೇಳೆ ಕೆಲವೇ ಕೆಲವು ಕ್ಷಣಗಳ ಕಾಲ ಗ್ರಹಣ ಗೋಚರವಾಗಿತ್ತು. ಕೆಲವೊಂದು ಪ್ರದೇಶಗಳಲ್ಲಿ ಗ್ರಹಣ ಗೋಚರಿಸಿದ್ದರಿಂದ ಅಲ್ಲಿ ಸೂರ್ಯೋದಯ ತಡವಾಗಿತ್ತು. ದೆಹಲಿಯಲ್ಲಿ ಬೆಳಗ್ಗೆ 6.38ಕ್ಕೆ ಸೂರ್ಯೋದಯವಾಗಿದ್ದು, ಇಲ್ಲಿ ಗ್ರಹಣ 6.40ಕ್ಕೆ ಆರಂಭವಾಗಿ 6.44 ಕ್ಕೆ ಗ್ರಹಣ ಮೋಕ್ಷವಾಗಿತ್ತು. ಚೆನ್ನೈನಲ್ಲಿ ಬೆಳಗ್ಗೆ 6.20ಕ್ಕೆ ಸೂರ್ಯೋದಯವಾಗಿದ್ದು, 6.22ಕ್ಕೆ ಗ್ರಹಣ ಆರಂಭವಾಗಿ 6.48 ಕ್ಕೆ ಮೋಕ್ಷವಾಗಿತ್ತು.