ದೇಶ

ಬರೋಬ್ಬರಿ 54,000 ಕೋಟಿ ಸಾಲಕ್ಕೆ ಬೇಡಿಕೆ ಇಟ್ಟ ಸೌದಿ

ವಿಶ್ವ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು ಎಂದೇ ಖ್ಯಾತಿ ಪಡೆದಿರುವ ಸೌದಿ ಅರೇಬಿಯಾ ಇದೀಗ ಭಾರೀ ಪ್ರಮಾಣ ಸಾಲ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ...

ಬರೋಬ್ಬರಿ 54,000 ಕೋಟಿ ಸಾಲಕ್ಕೆ ಬೇಡಿಕೆ ಇಟ್ಟ ಸೌದಿ
ಸಾಂದರ್ಭಿಕ ಚಿತ್ರ
Published On :

ದುಬೈ: ವಿಶ್ವ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು ಎಂದೇ ಖ್ಯಾತಿ ಪಡೆದಿರುವ ಸೌದಿ ಅರೇಬಿಯಾ ಇದೀಗ ಭಾರೀ ಪ್ರಮಾಣ ಸಾಲ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ತೈಲ ಬೆಲೆ ಇಳಿಕೆ, ಹಣಕಾಸು ಸಮಸ್ಯೆಯಿಂದಾಗಿ ಸೌದಿ ಅರೇಬಿಯಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ ರು. 54,000 ಸಾವಿರ ಕೋಟಿ ಸಾಲ ಮಾಡಲು ಮುಂದಾಗಿದೆ. ಅಲ್ಲದೆ ಮುಂದಿನ 5 ವರ್ಷಗಳಲ್ಲಿ ಅದನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಸಾಲದ ಬೇಡಿಕೆ ಕುರಿತಂತೆ ಸೌದಿ ಆಡಳಿತ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಸಾಲದ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಕೇಳಿಕೊಂಡಿದೆ.

ಕೆಲವು ದಿನಗಳ ಹಿಂದಷ್ಟೇ ಈ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ವರದಿಯಲ್ಲಿ ಸೌದಿ ಅಂತಾರಾಷ್ಟ್ರೀಯ ಸಾಲ ಪಡೆವ ಬಗ್ಗೆ ಬ್ಯಾಂಕುಗಳೊಂದಿಗೆ ಯೋಜನೆ ರೂಪಿಸುವ ಚರ್ಚೆ ನಡೆಸಿದ್ದಾಗಿ ಹೇಳಲಾಗಿತ್ತು. ಆದರೆ ಈ ಕುರಿತ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಕಳೆದ ವರ್ಷ ಸೌದಿಯ ವಿತ್ತೀಯ ಕೊರತೆ 68 ಸಾವಿರ ಕೋಟಿ ಗಳಿಗೆ ತಲುಪಿತ್ತು. ಹೀಗಾಗಿ ಅದು ವಿದೇಶ ಸಾಲ ಪಡೆಯಲು ಮುಂದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.