ನವದೆಹಲಿ: ಮೇಡಂ ತುಸಾಡ್‌ನಲ್ಲಿ ಮೇಣದ ಪ್ರತಿಮೆ ನಿರ್ಮಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ನೂರಕ್ಕಿಂತಲೂ ಹೆಚ್ಚು ಫೋಟೋ ತೆಗೆಯಲಾಗಿದೆ. ಈ ವಿಷಯವನ್ನು ಮೇಡಂ ತುಸಾಡ್ ಟ್ವೀಟ್ ಮೂಲಕ ಬಹಿರಂಗ ಪಡಿಸಿದೆ.
ಜಾಗತಿಕ ವಲಯದಲ್ಲಿ ಹೆಚ್ಚು ಪ್ರಭಾವಿ ವ್ಯಕ್ತಿ ಮೋದಿ. ಮ್ಯೂಸಿಯಂನಲ್ಲಿ ಕ್ರೀಮ್ ಬಣ್ಣದ ಕುರ್ತಾ ಮತ್ತು ಜಾಕೆಟ್ ಧರಿಸಿ ನಮಸ್ಕಾರ ಮಾಡುತ್ತಿರುವ ಆಕೃತಿಯಲ್ಲಿ ಮೋದಿಯವರ ಪ್ರತಿಮೆ ನಿರ್ಮಿಸಲಾಗುವುದು ಎಂದು ಎಂದು ಮೇಣದ ಪ್ರತಿಮೆಗಳ ಮ್ಯೂಸಿಯಂ ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಪ್ರಸ್ತುತ ಮ್ಯೂಸಿಯಂನಲ್ಲಿ ಮಹಾತ್ಮಾ ಗಾಂಧಿ, ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಹೃತಿಕ್ ರೋಷನ್, ಐಶ್ವರ್ಯಾ ರೈ, ಸಲ್ಮಾನ್ ಖಾನ್, ಕರೀನಾ ಕಪೂರ್, ಮಾಧುರಿ ದೀಕ್ಷಿತ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಮೇಣದ ಪ್ರತಿಮೆ ಇದೆ.