

ನವದೆಹಲಿ: ಮಧ್ಯಪ್ರದೇಶದ ವಿಶ್ವವಿದ್ಯಾನಿಲಯವೊಂದು ವಿವಾದವೊಂದನ್ನು ಮೈಮೇಲೆಳೆದುಕೊಂಡಿದೆ. ಭಾರತದ ಪ್ರಮುಖ ದಿನಾಂಕಗಳನ್ನು ಪಟ್ಟಿಯಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಸೇರಿಸಿದೆ.
ವಿಶ್ವವಿದ್ಯಾನಿಲಯದ ಡಾ. ಹರಿಸಿಂಗ್ ಗೌರ್ ಅಧಿಕೃತ ಡೈರಿಯಲ್ಲಿ ಪಟ್ಟೀಯಾಗಿರುವ 2016 ನೇ ಸಾಲಿನ ಭಾರತದ ಪ್ರಮುಖ ದಿನಾಂಕಗಳ ಪಟ್ಟಿಯಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯನ್ನೂ ಸೇರಿಸಲಾಗಿದೆ.
ಈ ಪ್ರಮಾದದ ಬಗ್ಗೆ ವಿಶ್ವವಿದ್ಯಾನಿಲಯ ಈ ವರೆಗೂ ಪ್ರತಿಕ್ರಿಯೆ ನೀಡಿಲ್ಲ. ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತದ ಪ್ರಮುಖ ಪಟ್ಟಿಗಳಲ್ಲಿ ಸೇರಿಸಿರುವುದರ ಬಗ್ಗೆ ವಿಚಾರಣೆ ನಡೆದರೆ ವಿಶ್ವವಿದ್ಯಾನಿಲಯ ಮುಜುಗರ ಎದುರಿಸಲಿದೆ.