ನ್ಯಾಯಾಲಯದ ಆವರಣದಲ್ಲೇ ಬೆಂಕಿ ಹಚ್ಚಿಕೊಂಡ ವಕೀಲ

ವಕೀಲನೊಬ್ಬ ಬೆಂಕಿ ಹಚ್ಚಿಕೊಂಡು ಗುಜರಾತ್ ಹೈಕೋರ್ಟ್‌‌ ಮುಖ್ಯ ನ್ಯಾಯಮೂರ್ತಿ ಅವರ ಕೋಣೆಯತ್ತ ಓಡಲು ಪ್ರಯತ್ನಿಸಿದ ಘಟನೆ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಅಹ್ಮದಾಬಾದ್: ವಕೀಲನೊಬ್ಬ ಬೆಂಕಿ ಹಚ್ಚಿಕೊಂಡು ಗುಜರಾತ್ ಹೈಕೋರ್ಟ್‌‌ ಮುಖ್ಯ ನ್ಯಾಯಮೂರ್ತಿ ಅವರ ಕೋಣೆಯತ್ತ ಓಡಲು ಪ್ರಯತ್ನಿಸಿದ ಘಟನೆ ನಡೆದಿದೆ.

ಸೂರತ್‌‌ನ ಕಿಶೋರ್ ಅಗರವಾಲ್ ಎಂಬ ವಕೀಲ ಹೈಕೋರ್ಟ್‌‌ ಆವರಣದಲ್ಲಿ ಇದ್ದಕ್ಕಿದ್ದಂತೇ ಬೆಂಕಿ ಹಚ್ಚಿಕೊಂಡು ಮುಖ್ಯ ನ್ಯಾಯಮೂರ್ತಿ ಕೊಠಡಿಯತ್ತ ಓಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಇತರ ವಕೀಲರು ಆತನನ್ನು ತಡೆದು ಬೆಂಕಿ ನಂದಿಸಿದ್ದಾರೆ. ಅಗರವಾಲ್‌‌ಗೆ ಶೇ. 15ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಿಳೆಯೊಬ್ಬರಿಗೆ ಹಣಕಾಸು ವಿಚಾರದಲ್ಲಿ ಮೋಸ ಮಾಡಿದ ಆರೋಪ ಅಗರವಾಲ್‌‌ ಮೇಲಿದ್ದು, ಕಳೆದ ನಾಲ್ಕು ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ. ಈ ವೇಳೆ ಅಗರವಾಲ್‌‌‌ನಿಂದ ಮೋಸ ಹೋದ ಮಹಿಳೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಅಗರವಾಲ್ ತನ್ನನ್ನು ಮುಗ್ಧ ಎಂದು ಸಾಬೀತುಪಡಿಸಲು ಈ ರೀತಿ ಆತ್ಮಹತ್ಯೆ ನಾಟಕವಾಡಿದ್ದಾನೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com