ಹೋಳಿ ಆಚರಣೆ: ಬಿಹಾರದಲ್ಲಿ ಮೋದಿ, ಲಾಲು ಮಾಲುಗಳಿಗೆ ಭಾರಿ ಬೇಡಿಕೆ

ಹೋಳಿ ಆಚರಣೆಯಲ್ಲಿ ಪ್ರಧಾನಿ ನರೇಂದ್ರ, ಬಿಹಾರದ ಸಿಎಂ ನಿತೀಶ್ ಕುಮಾರ್, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಭಾರಿ ಬೇಡಿಕೆ ಬಂದಿದೆ.
ಮೋದಿ ಮಾಸ್ಕ್
ಮೋದಿ ಮಾಸ್ಕ್
Updated on: 
ಪಾಟ್ನಾ: ಬಿಹಾರದಲ್ಲಿ ಬಣ್ಣಗಳ ಹಬ್ಬ ಹೋಳಿಯ ಆಚರಣೆ ಭರ್ಜರಿಯಾಗಿ ನಡೆಯುತ್ತಿದೆ, ಇದಕ್ಕೆ ರಾಜಕೀಯವೂ ಹೊರತಾಗಿಲ್ಲ. ಹೋಳಿ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಸಿಎಂ ನಿತೀಶ್ ಕುಮಾರ್, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಭಾರಿ ಬೇಡಿಕೆ ಬಂದಿದೆ. 
ಹೋಳಿ ಆಚರಣೆಗಾಗಿ ಬಿಹಾರದ ಮಾರುಕಟ್ಟೆಗಳಲ್ಲಿ ಮೋದಿ ಮಾಸ್ಕ್, ಮೋದಿ ಕ್ಯಾಪ್, ನಿತೀಶ್ ಕುಮಾರ್ ಪಿಚ್ಕಾರಿ, ಲಾಲೂ ಪಿಚ್ಕಾರಿಗಳಿಗೆ ಭಾರಿ ಬೇಡಿಕೆ ಬಂದಿದೆ. ಮೋದಿ, ನಿತೀಶ್, ಲಾಲೂ ವಸ್ತುಗಳಿಗೆ ಭಾರಿ ಬೇಡಿಕೆ ಇವೆ ಎಂದು ವರ್ತಕರು ತಿಳಿಸಿದ್ದಾರೆ. 
ರಾಜಕೀಯದಲ್ಲಿ ಮಾತ್ರವಲ್ಲದೇ ಮಾರುಕಟ್ಟೆಯಲ್ಲೂ ಮೋದಿ, ನಿತೀಶ್ ಕುಮಾರ್, ಲಾಲೂ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. 
ಮಾರುಕಟ್ಟೆಯಲ್ಲಿ ಮೋದಿ ಮಾಸ್ಕ್ ಹಾಗೂ ಮೋದಿ ಕ್ಯಾಪ್ ಗಳಿಗೆ ಅತ್ಯಂತ ಹೆಚ್ಚಿನ ಬೇಡಿಕೆ ಇದ್ದು ಪಿಚ್ಕಾರಿಗಳ ಪೈಕಿ ನಿತೀಶ್ ಹಾಗೂ ಲಾಲು ಪಿಚ್ಕಾರಿಗಳಿಗೆ ಭಾರಿ ಡಿಮಾಂಡ್ ಇದೆಯಂತೆ, ಮೋದಿ ಮಾಸ್ಕ್, ಕ್ಯಾಪ್ ಗಳು 125 ರೂಪಾಯಿಂದ 200 ರೂಪಾಯಿಗಳಿಗೆ  ಮಾರಾಟವಾಗುತ್ತಿದ್ದರೆ, ಮೋದಿ ಕ್ಯಾಪ್ ಗಳ ದರ 80 ರೂಪಾಯಿ ಇದೆ. ಉಳಿದೆಲ್ಲಾ ಸೆಲಬ್ರಿಟಿಗಳಿಗಿಂತಲೂ ಮಾರುಕಟ್ಟೆಯಲ್ಲಿ ಮೋದಿ ಚಿತ್ರವಿರುವ ಮಾಸ್ಕ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ವ್ಯಾಪಾರಿ ಅಭಿಜಿತ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com