ತೆಲಂಗಾಣ ಸರ್ಕಾರದಿಂದ ಶಾಸಕರಿಗೆ ಐಫೋನ್, ಐ ಪಾಡ್ ಉಡುಗೊರೆ

ಒಂದೆಡೆ ತೆಲಂಗಾಣ ರಾಜ್ಯ ಬರದಿಂದ ತತ್ತರಿಸುತ್ತಿದೆ, ಮತ್ತೊಂದೆಡೆ ರಾಜ್ಯ ಸರ್ಕಾರ ಎಲ್ಲಾ ಶಾಸಕರಿಗೂ ಹೊಸ ಐಫೋನ್, ಐಪಾಡ್ ಗಳನ್ನು ಉಡುಗೊರೆಯಾಗಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್:  ಒಂದೆಡೆ ತೆಲಂಗಾಣ ರಾಜ್ಯ ಬರದಿಂದ ತತ್ತರಿಸುತ್ತಿದೆ, ಮತ್ತೊಂದೆಡೆ ರಾಜ್ಯ ಸರ್ಕಾರ ಎಲ್ಲಾ ಶಾಸಕರಿಗೂ ಹೊಸ ಐಫೋನ್, ಐಪಾಡ್ ಗಳನ್ನು ಉಡುಗೊರೆಯಾಗಿ ನೀಡಿದೆ.

ಇಂದು ವಿಧಾನ ಸಭೆ ಹಾಗೂ ವಿಧಾನ ಪರಿಷತ್ ನ ಎಲ್ಲಾ ಸದಸ್ಯರಿಗೂ ಸರ್ಕಾರ ದುಬಾರಿ ವೆಚ್ಚದ ಗ್ಯಾಡ್ಜೆಟ್ ಗಳನ್ನು ನೀಡಿದೆ. ಶಾಸಕರಿಗೆ ಈ ಐ ಫೋನ್ ಮತ್ತು ಐ ಪಾಡ್ ಉಡುಗೊರೆಯಾಗಿ ನೀಡಲು ತೆಲಂಗಾಣ ಸರ್ಕಾರ ಸುಮಾರು 1.5 ಕೋಟಿ ರು ಹಣ ವೆಚ್ಚ ಮಾಡಿದೆ.

ಇನ್ನು ತೆಲಂಗಾಣ ಹಣಕಾಸು ಸಚಿವ ಇಟೆಲಾ ರಾಜೇಂದರ್ ಇಂದು ರಾತ್ರಿ ಎಲ್ಲ ಶಾಸಕರಿಗೂ ಭೋಜನ ಕೂಟ ಏರ್ಪಡಿಸಿದ್ದಾರೆ.  ಶಾಸಕರಿಗೆ ಐಷಾರಾಮಿ ಉಡುಗೊರೆ ನೀಡುವುದು ಆಂಧ್ರ ಪ್ರದೇಶದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com