ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಕುಸಿದು ಬಿದ್ದ ಡಿಸ್ಕೋ ಡ್ಯಾನ್ಸರ್, 1 ಸಾವು

ಚೆನ್ನೈನ ಕಿಷ್ಕಿಂದ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಡಿಸ್ಕೋ ಡ್ಯಾನ್ಸರ್ ಎಂಬ ಹೆಸರಿನ ಮಷಿನ್ ಪ್ರಾಯೋಗಿಕ ಪರೀಕ್ಷೆಯ ವೇಳೆಯೇ...
ಡಿಸ್ಕೋ ಡ್ಯಾನ್ಸರ್
ಡಿಸ್ಕೋ ಡ್ಯಾನ್ಸರ್
ಚೆನ್ನೈ: ಚೆನ್ನೈನ ಕಿಷ್ಕಿಂದ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಡಿಸ್ಕೋ ಡ್ಯಾನ್ಸರ್ ಎಂಬ ಹೆಸರಿನ ಮಷಿನ್ ಪ್ರಾಯೋಗಿಕ ಪರೀಕ್ಷೆಯ ವೇಳೆಯೇ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ ಮತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಡಿಸ್ಕೋ ಡ್ಯಾನ್ಸರ್ ನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ವ್ಹೀಲ್ ಬ್ರೇಕ್ ಆಗಿ ಸುಮಾರು 15 ಅಡಿ ಎತ್ತರದಿಂದ ಕಳೆಗೆ ಬಿದ್ದಿದೆ. ಡಿಸ್ಕೋ ಡ್ಯಾನ್ಸರ್ ಮಷಿನ್ ಮೇಲೆ 25 ಕಾರ್ಮಿಕರಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 19 ವರ್ಷದ ಎಸ್ ಮಣಿಕಂಠನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅಲ್ಲದೆ ಗಾಯಗೊಂಡಿರುವ ಮತ್ತೊಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com