ಬಿಜೆಪಿ ಮುಖಂಡೆ, ನಟಿ ರೂಪಾ ಗಂಗೂಲಿ ಮೇಲೆ ಹಲ್ಲೆ, ತಲೆಗೆ ಪೆಟ್ಟು

ಪಶ್ಚಿಮ ಬಂಗಾಳ ಬಿಜೆಪಿ ಮುಖಂಡೆ ಹಾಗೂ ನಟಿ ರೂಪಾ ಗಂಗೂಲಿ ಅವರ ಮೇಲೆ ದುಷ್ಕರ್ಮಿಗಳು ಭಾನುವಾರ ಹಲ್ಲೆ ಮಾಡಿದ್ದು, ರೂಪಾ ಅವರ ತಲೆಗೆ ಗಂಭೀರ ಪೆಟ್ಟಾಗಿದೆ ಎಂದು ತಿಳಿದುಬಂದಿದೆ...
ಬಿಜೆಪಿ ಮುಖಂಡೆ ರೂಪಾ ಗಂಗೂಲಿ (ಸಂಗ್ರಹ ಚಿತ್ರ)
ಬಿಜೆಪಿ ಮುಖಂಡೆ ರೂಪಾ ಗಂಗೂಲಿ (ಸಂಗ್ರಹ ಚಿತ್ರ)

ಕೋಲ್ಕತಾ: ಪಶ್ಚಿಮ ಬಂಗಾಳ ಬಿಜೆಪಿ ಮುಖಂಡೆ ಹಾಗೂ ನಟಿ ರೂಪಾ ಗಂಗೂಲಿ ಅವರ ಮೇಲೆ ದುಷ್ಕರ್ಮಿಗಳು ಭಾನುವಾರ ಹಲ್ಲೆ ಮಾಡಿದ್ದು, ರೂಪಾ ಅವರ ತಲೆಗೆ ಗಂಭೀರ ಪೆಟ್ಟಾಗಿದೆ ಎಂದು  ತಿಳಿದುಬಂದಿದೆ.

ಮೂಲಗಳ ಪ್ರಕಾರ ರೂಪಾ ಅವರ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಹಲ್ಲೆ ಮಾಡಿದ ದುಷ್ಕರ್ಮಿಗಳು ತೃಣಮೂಲ  ಕಾಂಗ್ರೆಸ್ ಪಕ್ಷದ ಸದಸ್ಯರೇ ಎಂಬುದು ತಿಳಿದಿಲ್ಲ. ನಿನ್ನೆ ರಾಜಕೀಯ ದಾಳಿ ಸಂತ್ರಸ್ಥರನ್ನು ಭೇಟಿ ಮಾಡಿ 24 ಪರಗಣ ಜಿಲ್ಲೆಯ ಕೊಕ್ಡದ್ವೀಪದಿಂದ ವಾಪಾಸಾಗುತ್ತಿದ್ದ ರೂಪಾ ಗಂಗೂಲಿ ಅವರ  ವಾಹನದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದು, ಈ ವೇಳೆ ಅವರ ತಲೆಗೆ ಗಂಭೀರ ಪೆಟ್ಟಾಗಿದೆ. ಪ್ರಸ್ತುತ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಕಾರು ಬಹುತೇಕ  ಜಖಂಗೊಂಡಿದೆ.  

ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೂಪಾ ಪರಾಭವಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com