ಭಾರತ ಗಡಿ ಪ್ರವೇಶಿಸಲು ಯತ್ನ; ಸೇನೆಯಿಂದ ಇಬ್ಬರು ಉಗ್ರರ ಹತ್ಯೆ

ಭಾರತ ಗಡಿಯೊಳಗೆ ನುಸುಳಲು ಉಗ್ರರು ಯತ್ನಿಸುತ್ತಿದ್ದ ವೇಳೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ...
ಕುಪ್ವಾರದಲ್ಲಿ ಗುಂಡಿನ ದಾಳಿ (ಸಂಗ್ರಹ ಚಿತ್ರ)
ಕುಪ್ವಾರದಲ್ಲಿ ಗುಂಡಿನ ದಾಳಿ (ಸಂಗ್ರಹ ಚಿತ್ರ)
Updated on: 

ಶ್ರೀನಗರ: ಭಾರತ ಗಡಿಯೊಳಗೆ ನುಸುಳಲು ಉಗ್ರರು ಯತ್ನಿಸುತ್ತಿದ್ದ ವೇಳೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಸೇನಾ  ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶವಾದ ಕುಪ್ವಾರ ಸಮೀಪ ನೌಗಾಮ್ ನಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಬೆಳ್ಳಗ್ಗೆಯಿಂದಲೇ ಭದ್ರತಾ ದಳದ ಯೋಧರು ಮತ್ತು ಉಗ್ರರ ನಡುವೆ  ಗುಂಡಿನ ಚಕಮಕಿ ನಡೆಯುತ್ತಿದ್ದು, ಅಡಗಿ ಕುಳಿತಿರುವ ಇನ್ನಷ್ಟು ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮೂಲಗಳ ಪ್ರಕಾರ ಐದರಿಂದ ಆರು ಉಗ್ರರು ಒಳ ನುಸುಳಿರುವ ಶಂಕೆ ಇದ್ದು,  ಉಗ್ರರು ಸ್ಥಳೀಯ ಗುಡಿಸಲುಗಳಲ್ಲಿ ಅಡಗಿರುವ ಬಗ್ಗೆ ಮಾಹಿತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಗಡಿ ನಿಯಂತ್ರಣ ರೇಖೆಗೆ ಸಮೀಪದ ನೌಗಾಮ್ ನಲ್ಲಿ ಉಗ್ರರು ನುಸುಳಿ ಒಳಬಂದಿದ್ದು, ಉಗ್ರರ ವಿರುದ್ಧ  ಭದ್ರತಾ ದಳ ಗುಂಡಿನ ಕಾಳಗದಲ್ಲಿ ತೊಡಗಿಕೊಂಡಿದೆ. ಅಡಗಿರುವ ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.ಯ ಅಂತೆಯೇ ಕುಪ್ವಾರ ಮಾತ್ರವಲ್ಲದೇ ಇತರೆ  ಗಡಿಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು, ಅರಣ್ಯ ಪ್ರದೇಶವಾಗಿರುವ ಕಾರಣ ಇಲ್ಲಿನ ಗುಡಿಸಲುಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ.

ಪ್ರಸ್ತುತ 35 ರಾಷ್ಟ್ರೀಯ ರೈಫಲ್ಸ್ ತಂಡ ಸೈನಿಕರು ಅಡಗಿ ಕುಳಿತಿರುವ ಉಗ್ರರಿಗಾಗಿ ಶೋಧ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com