ಜುಲೈ ನಂತರ ಇಂದು ಮೊದಲ ಬಾರಿಗೆ ಕಾಶ್ಮೀರದಲ್ಲಿ ಕಂಡುಬರದ ಕರ್ಫ್ಯೂ

ಅನೇಕ ತಿಂಗಳುಗಳಿಂದ ಪ್ರತಿಭಟನೆ, ಬಂದ್, ಕರ್ಫ್ಯೂ ಎಂಬ ವಾತಾವರಣವಿದ್ದ ಕಾಶ್ಮೀರದಲ್ಲಿ ಪರಿಸ್ಥಿತಿ...
ಕಾಶ್ಮೀರ ಕರ್ಫ್ಯೂ(ಸಂಗ್ರಹ ಚಿತ್ರ)
ಕಾಶ್ಮೀರ ಕರ್ಫ್ಯೂ(ಸಂಗ್ರಹ ಚಿತ್ರ)
Updated on: 
ಶ್ರೀನಗರ: ಅನೇಕ ತಿಂಗಳುಗಳಿಂದ ಪ್ರತಿಭಟನೆ, ಬಂದ್, ಕರ್ಫ್ಯೂ ಎಂಬ ವಾತಾವರಣವಿದ್ದ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ಕಳೆದ ಜುಲೈಯಿಂದ ಇದೇ ಮೊದಲ ಬಾರಿಗೆ ಇಂದು ಕರ್ಫ್ಯೂ ಕಂಡುಬರಲಿಲ್ಲ.
ಇಂದು ಶುಕ್ರವಾರವಾದ್ದರಿಂದ ಮಸೀದಿಗಳಲ್ಲಿ ಪ್ರಾರ್ಥನೆ ನಂತರ ಕಾನೂನು, ಸುವ್ಯವಸ್ಥೆಗೆ ಭಂಗವುಂಟಾಗಬಹುದು ಎಂಬ ಭೀತಿಯಿಂದ ಅಧಿಕಾರಿಗಳು ಶ್ರೀನಗರದ ಹಳೆ ನಗರ ಪ್ರದೇಶ ಸೇರಿದಂತೆ ಕೆಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಲು ಮುಂದಾಗಿದ್ದರು. ಆದರೆ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಮನಗಂಡ ಮೇಲೆ ನಿರ್ಬಂಧ ವಿಧಿಸದಂತೆ ತೀರ್ಮಾನ ಕೈಗೊಂಡಿದ್ದಾರೆ.
ಇಂದು ಕಾಶ್ಮೀರದ ಯಾವುದೇ ಭಾಗಗಳಲ್ಲಿಯೂ ಕರ್ಫ್ಯೂ ವಿಧಿಸಿಲ್ಲ. ಆದರೆ ಕರ್ಫ್ಯೂ ತರಹದ ನಿರ್ಬಂಧವನ್ನು ಶ್ರೀನಗರದ ಬಟಮಲೂ ಪೊಲೀಸ್ ಠಾಣಾ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ಇದೀಗ ಪರಿಸ್ಥಿತಿ ತುಂಬಾ ಸುಧಾರಣೆಯಾಗಿದೆ. ಜನರು ನಿರ್ಭೀತಿಯಿಂದ ಓಡಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಕೂಡ ಸತತ 119ನೇ ದಿನವಾದ ಇಂದು ಕೂಡ ಸಾಮಾನ್ಯ ಜನಜೀವನಕ್ಕೆ ಪರಿಣಾಮವುಂಟಾಗಿದ್ದು, ಪ್ರತ್ಯೇಕತಾವಾದಿಗಳು ನಡೆಸಿದ ಮುಷ್ಕರದಲ್ಲಿ ಕಳೆದ ರಾತ್ರಿ ದುಷ್ಕರ್ಮಿಗಳು ಸೌರಾದಲ್ಲಿನ ಸರ್ಕಾರಿ ಶಾಲೆಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಶಾಲೆಯ ಕೊಠಡಿಯಲ್ಲಿದ್ದ ಪೀಠೋಪಕರಣಗಳು ಧ್ವಂಸಗೊಂಡಿವೆ.
ಕಾಶ್ಮೀರದಲ್ಲಿನ ಪ್ರತಿಭಟನೆಯಲ್ಲಿ ಇದುವರೆಗೆ 27 ಶಾಲೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com