ಚೀನಾ ಸರ್ಕಾರ ಟಿಬೆಟ್ ಜನರ ಹಕ್ಕುಗಳನ್ನು ಗೌರವಿಸಬೇಕು, ಟಿಬೆಟಿಯನ್ನರ ಮೂಲಭೂತ ಹಕ್ಕುಗಳನ್ನು ಪುನರ್ಸ್ಥಾಪಿಸಬೇಕು ಎಂದು ಲೊಬ್‌ಸಾಂಗ್ ಸಾಂಗೆ ಕರೆ ನೀಡಿದ್ದಾರೆ. ಗೋವಾದಲ್ಲಿ ನಡೆದ ಇಂಡಿಯಾ ಐಡಿಯಾಸ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಟಿಬೆಟ್ ನ ಪ್ರಧಾನಿ, " ಚೀನಾ ವಿಶ್ವ ಪ್ರಸಿದ್ಧ ಲಾರಂಗ್ ಗಾರ್ ಆಶ್ರಮವನ್ನು ನಾಶ ಮಾಡಲು ಆದೇಶ ನೀಡಿದೆ. ಚೀನಾದ ಧಾರ್ಮಿಕ ದಬ್ಬಾಳಿಕೆ ಕೊನೆಗೊಳ್ಳಬೇಕು, ಚೀನಾದಲ್ಲಿ ಹೆಚ್ಚಿನ ಬೌದ್ಧರು ಇರುವ ಕಾರಣ ಭಾರತ- ಚೀನಾದ ನಡುವೆ ಸೌಹಾರ್ದಯುತವಾದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ದ್ವಿಪಕ್ಷೀಯ ಸಂಬಂಧ ಇರಬೇಕು ಎಂದು ಟಿಬೆಟ್ ಪ್ರಧಾನಿ ಸಾಂಗೆ ಅಭಿಪ್ರಾಯಪಟ್ಟಿದ್ದಾರೆ.