ಹೆಣ್ಣು ಮಗುವಿಗೆ ಜನ್ಮ ನೀಡಿದ 17ರ ಹುಡುಗಿ, 12 ವರ್ಷದ ಬಾಲಕನ ವಿರುದ್ಧ ಕೇಸು

17 ವರ್ಷದ ಬಾಲಕಿಯೊಬ್ಬಳು ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹುಡುಗಿ ಗರ್ಭ ಧರಿಸಲು ಕಾರಣನಾದ 12 ವರ್ಷ ಪ್ರಾಯ ಹುಡುಗನ ವಿರುದ್ಧ ಕೇಸು...
ಶಿಶು
ಶಿಶು
ಕೊಚ್ಚಿ: 17 ವರ್ಷದ ಬಾಲಕಿಯೊಬ್ಬಳು ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹುಡುಗಿ ಗರ್ಭ ಧರಿಸಲು ಕಾರಣನಾದ 12 ವರ್ಷ ಪ್ರಾಯ ಹುಡುಗನ ವಿರುದ್ಧ ಕೇಸು ದಾಖಲಾಗಿದೆ. 
ಇಂತ ವಿಲಕ್ಷಣ ಘಟನೆ ನಡೆದಿದ್ದು ವಿದೇಶದಲ್ಲಾ ಕೇರಳದ ಕೊಚ್ಚಿಯಲ್ಲಿ. 12 ವರ್ಷ ಪ್ರಾಯದ ಹುಡುಗನ ವಿರುದ್ಧ ಕಳಮಸ್ಸೇರಿ ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. 
ಹೆರಿಗೆಯ ಸಂದರ್ಭದಲ್ಲಿ ಹುಡುಗಿಯು ತನಗೆ 18 ವರ್ಷ ಪ್ರಾಯ ಎಂದು ಹೇಳಿಕೊಂಡಿದ್ದು, ಆದರೆ ಹುಡುಗಿಗೆ 18 ವರ್ಷ ತುಂಬಲು ಇನ್ನು ಎರಡು ತಿಂಗಳು ಬಾಕಿ ಇತ್ತು. ಹುಡುಗಿಯ ಸಂಬಂಧಿಕರು ಹುಡುಗಿ ಗರ್ಭ ಧರಿಸಲು 12 ವರ್ಷದ ಪ್ರಾಯ ಹುಡುಗ ಎಂದು ಹೇಳಿದ್ದರಿಂದ ಆಸ್ಪತ್ರೆ ಸಿಬ್ಬಂದಿ ಕೂಡಲೇ ಚೈಲ್ಡ್ ಲೈನ್ ಗೆ ತಿಳಿಸಿದ್ದಾರೆ. 
ಇನ್ನು ಹುಡುಗಿಯ ಸಂಬಂಧಿಕರು ನಾನು ಮಗುವನ್ನು ಪೋಷಿಸಲು ಬಯಸುವುದಿಲ್ಲ ಎಂದು ಹೇಳಿದ್ದರಿಂದ ನವಜಾತ ಶಿಶುವನ್ನು ಶಿಶು ಕಲ್ಯಾಣ ಮಂಡಳಿಗೆ ಕಳುಹಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com