ಉತ್ತರ ಪ್ರದೇಶ ಹಾಗೂ ರಾಜಧಾನಿ ನವದೆಹಲಿಯ ಹಲವೆಡೆ ಉಪ್ಪಿನ ಕೊರತೆ ಉಂಟಾಗಿದ್ದು, ದುಬಾರಿ ಹಣವನ್ನು ನೀಡಿ ಉಪ್ಪನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಸಹ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಯಾವುದೇ ರೀತಿಯ ಉಪ್ಪಿನ ಕೊರತೆಯಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಮ್ ವಿಲಾಸ್ ಪಾಸ್ವಾನ್ ಅವರು ಹೇಳಿದ್ದಾರೆ.