ಡಿಸೆಂಬರ್ 15ರವರಗೆ ಹಳೇ ನೋಟು ಚಲಾವಣೆಗೆ ಅವಕಾಶ, ಇಂದಿನಿಂದ ನೋಟು ಬದಲಾವಣೆ ಇಲ್ಲ

ನೋಟ್ ನಿಷೇಧ ನೀತಿಯನ್ನು ಮತ್ತಷ್ಟು ಕಠಿಣಗೊಳಿಸಿರುವ ಕೇಂದ್ರ ಸರ್ಕಾರ, ಇಂದಿನಿಂದ ಬ್ಯಾಂಕ್ ಹಾಗೂ ಅಂಚೆ ಕಚೇರಿಯ ಕೌಂಟರ್....
ನೋಟ್ ಬದಲಾವಣೆಗಾಗಿ ಕ್ಯೂ ನಿಂತಿರುವ ಗ್ರಾಹಕರು
ನೋಟ್ ಬದಲಾವಣೆಗಾಗಿ ಕ್ಯೂ ನಿಂತಿರುವ ಗ್ರಾಹಕರು
Updated on
ನವದೆಹಲಿ: ನೋಟ್ ನಿಷೇಧ ನೀತಿಯನ್ನು ಮತ್ತಷ್ಟು ಕಠಿಣಗೊಳಿಸಿರುವ ಕೇಂದ್ರ ಸರ್ಕಾರ, ಇಂದಿನಿಂದ  ಬ್ಯಾಂಕ್ ಹಾಗೂ ಅಂಚೆ ಕಚೇರಿಯ ಕೌಂಟರ್ ಗಳಲ್ಲಿ ಹಳೆ 500 ಹಾಗೂ 1000 ರುಪಾಯಿ ನೋಟ್ ಗಳ ಬದಲಾವಣೆಯನ್ನು ಸ್ಥಗಿತಗೊಳಿಸುವುದಾಗಿ ಗುರುವಾರ ಘೋಷಿಸಿದೆ.
ನೋಟ್ ಬದಲಾವಣೆಯನ್ನು ಸ್ಥಗಿತಗೊಳಿಸಿರುವ ಕೇಂದ್ರ ಹಣಕಾಸು ಸಚಿವಾಲಯ, ಪೆಟ್ರೋಲ್ ಬಂಕ್, ಮೆಡಿಕಲ್ ಶಾಪ್, ಆಸ್ಪತ್ರೆ ಸೇರಿದಂತೆ ಸರ್ಕಾರಿ ಸೇವೆಗಳಿಗೆ ಹಳೆ 500 ಹಾಗೂ 1000 ರುಪಾಯಿ ನೋಟ್ ಚಲಾವಣೆಗೆ ಡಿಸೆಂಬರ್ 15ರವರೆಗೆ ಅವಕಾಶ ನೀಡುವ ಮೂಲಕ ಗ್ರಾಹಕರಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.
ಕೇಂದ್ರ ಸರ್ಕಾರ ನಿಷೇಧ ಮಾಡಿರುವ 500 ಮತ್ತು 1000 ರು.ಮುಖಬೆಲೆಯ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿಗಳಲ್ಲಿ ಚಲಾವಣೆ ಮಾಡುವ ಅವಧಿ ಇಂದಿಗೆ ಅಂತ್ಯಗೊಂಡಿದ್ದು, ಆದರೆ ಇದೀಗ ಅದನ್ನು ಡಿಸೆಂಬರ್ 15ರವರೆಗೆ ವಿಸ್ತರಿಸಿದೆ. 
ಅಂಚೆಕಚೇರಿ, ಸರ್ಕಾರಿ ಆಸ್ಪತ್ರೆ, ಹಾಲಿನ ಕೇಂದ್ರ, ರೈಲ್ವೇ ಟಿಕೆಟ್ ಬುಕ್ಕಿಂಗ್, ಶವಾಗಾರಗಳು, ಹೆದ್ದಾರಿ ಟೋಲ್ ಕೇಂದ್ರ ಸೇರಿದಂತೆ ಇತರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕೇಂದ್ರಗಳಲ್ಲಿ ಹಳೆಯ ನೋಟುಗಳ ಚಲಾವಣೆಗೆ ಅನುವು ಮಾಡಿಕೊಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com